Advertisement

ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

08:16 PM Sep 19, 2020 | Suhan S |

ಹಿರಿಯೂರು: ನಗರದ ವಾಗ್ದೇವಿ ಸಭಾಂಗಣದಲ್ಲಿ ನಗರದ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಸಭೆ ನಡೆಯಿತು. ಸಭೆಯಲ್ಲಿ 1994-95ರಲ್ಲಿ ಆರಂಭಗೊಂಡ ಶಾಲೆಗಳ ಶಿಕ್ಷಕರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದು, 2014 -15 ರ ನಂತರ ಅನುದಾನಕ್ಕೆ ಒಳಪಟ್ಟು, ಕೇವಲ 10-12 ವರ್ಷ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾಗುತ್ತಿರುವ ಶಿಕ್ಷಕರು ಪಿಂಚಣಿ ಸೌಲಭ್ಯದಿಂದ ವಂಚಿರಾಗಿ, ಸಂಕಷ್ಟಕ್ಕೆ ಒಳಗಾಗುತ್ತಿದ್ದು ಈಗಾಗಲೇ ಕೇವಲ 8-10 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಜೀವ ಸಂಕಷ್ಟಕ್ಕೆ ಗುರಿಯಾಗುತ್ತಿರುವುದರಿಂದ ಸರ್ಕಾರ ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡಬೇಕು. ಶಿಕ್ಷಕರಿಗೆ ಅನುಕೂಲ ಕಲ್ಪಿಸಬೇಕೆಂದು ಚರ್ಚೆ ನಡೆಸಲಾಯಿತು.

Advertisement

ಕೇವಲ 2000-3000 ಸಾವಿರ ರೂ. ಗಳಿಗೆ ಕೆಲಸ ಮಾಡುತ್ತಿದ್ದ ಶಿಕ್ಷಕರಿಗೆ 2014ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು 1994-95 ರಲ್ಲಿ ಆರಂಭಗೊಂಡಪ್ರೌಢಶಾಲೆಗಳಿಗೆ ಅನುದಾನಕ್ಕೆ ಒಳಪಡಿಸಿ ಶಿಕ್ಷಕರಿಗೆ ಹೂಸ ಬದುಕನ್ನು ನೀಡಿದ್ದರು. ಇದೀಗ ಅವರೇ ಮುಖ್ಯಮಂತ್ರಿಗಳು ಆಗಿರುವುದರಿಂದ ಈ ಶಾಲೆಗಳ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಶಾಸಕಿ ಪೂರ್ಣಿಮಾ ಅವರ ಸಹಕಾರದೊಂದಿಗೆ ಶಿಕ್ಷಣ ಸಚಿವರೊಂದಿಗೆ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಯನ್ನು  ಮನವರಿಕೆ ಮಾಡಲು ಸಭೆ ತೀರ್ಮಾನಿಸಿತು.

ದಯಾನಂದ್‌, ತಿಪ್ಪೇರುದ್ರಪ್ಪ, ಎಚ್‌.ಸಿ. ಶರಣಪ್ಪ, ಶಿವಶಂಕರ್‌ ಮಠದ್‌, ಉಮಾಶಂಕರ್‌, ಚಂದ್ರಶೇಖರ್‌, ಮಂಜುನಾಥ್‌ ದಿಲೀಪ್‌, ಜಾಕೀರ್‌ ಹುಸೇನ್‌, ನಿರಂಜನ್‌, ಮಹಮ್ಮದ್‌ ಪೀರ್‌,  ಸ್ಟ್ಯಾನ್ಲಿ, ಅರಳಪ್ಪ,ವೈ. ಯಶೋಧಮ್ಮ, ಧರ್ಮಶೀಲ, ವಹೀದರಹೇಮಾನ್‌, ತನುಜ, ಸುಜಾತ, ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next