Advertisement

ಬೆಳೆಹಾನಿ ಪರಿಹಾರ ತಾರತಮ್ಯ ತಡೆಗೆ ಒತ್ತಾಯ

06:26 PM Jul 10, 2021 | Team Udayavani |

ಸೇಡಂ: ಅತಿವೃಷ್ಟಿ, ಅನಾವೃಷ್ಟಿಯಿಂದ ಹೆಸರು, ಉದ್ದು, ತೊಗರಿ ಬೆಳೆಹಾನಿ ಪರಿಹಾರ ಕಲ್ಪಿಸುವಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ) ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟಿಸಿ, ಮನವಿ ಪತ್ರ ಸಲ್ಲಿಸಲಾಯಿತು.

Advertisement

ಕಳೆದ ವರ್ಷ ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಸರಕಾರ ಪರಿಹಾರವನ್ನು ಘೋಷಿಸಿತ್ತು. ಆದರೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೆಲವರಿಗೆ 25 ಸಾವಿರ ರೂ., 30 ಸಾವಿರ ಮತ್ತು 50 ಸಾವಿರ ರೂ. ನೀಡಲಾಗುತ್ತಿದೆ ಇದರಲ್ಲಿ ಅತಿ ಸಣ್ಣ ರೈತರಿಗೆ ಯಾವ ಪರಿಹಾರವೂ ದೊರೆಯುತ್ತಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಮಹೇಶ ಪಾಟೀಲ ಬಟಗೇರಾ, ಶ್ರೀನಿವಾಸರೆಡ್ಡಿ ಮದನಾ, ದೇವು ನಾಟೀಕಾರ, ಭೀಮಯ್ಯ ಗುತ್ತೇದಾರ, ಪ್ರವೀಣ ಕೋಡ್ಲಾ, ಮಲ್ಲಿಕಾರ್ಜುನ ಬೆನಕನಹಳ್ಳಿ, ರವಿಸಿಂಗ ಇಮಡಾಪುರ, ರವಿ ಗುತ್ತೇದಾರ, ದೇವಿಂದ್ರ ಹಂದರಕಿ, ಗುಂಡಪ್ಪ ಪೂಜಾರಿ, ವೆಂಕಟೇಶ ಕೋಡ್ಲಾ, ಚನ್ನಬಸಪ್ಪ ಬೆನಕನಹಳ್ಳಿ, ವಿರೇಶ ಕೋಟ್ರಕಿ, ಸುಭಾಶ ನಾಟೀಕಾರ, ಮಹೇಶ ಕೋಡ್ಲಾ, ಶ್ರೀನಾಥ ಕಲಕಂಭ, ವೆಂಕಟರೆಡ್ಡಿ, ಭಗವಾನ ಕೊಲ್ಲೂರ್‌, ಅಂಜಿಲಪ್ಪ ಬೋಯಿನ್‌, ಆಶಪ್ಪ ನಾಟಿಕಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next