Advertisement
ಒಂದೊಮ್ಮೆ ಯೋಚಿಸಿದರೆ ಇಡೀ ಜೀವಜಗತ್ತಿನ ಸಹಸ್ರಾರು ಜೀವರಾಶಿಗಳ ಉಗಮವು ಎರಡು ಅಣುಗಳ ಸಂಯೋಗದಿಂದಾಗಿದ್ದರೆ, ಅವುಗಳ ಜೀವನವು ಜನನ ಹಾಗೂ ಮರಣ ಎಂಬ “ಎರಡು’ ಸ್ಥಿತಿಗಳ ನಡುವೆ ನಡೆಯುತ್ತದೆ. ಪ್ರಾಣಿಗಳಲ್ಲಿಯೇ ಆಗಿರಲಿ, ಪಕ್ಷಿಗಳಲ್ಲಿಯೇ ಆಗಿರಲಿ ಅಥವಾ ಮನುಷ್ಯನಲ್ಲಿಯೇ ಆಗಿರಲಿ, ಹುಟ್ಟು-ಸಾವು ಎರಡೂ ಅನಿರೀಕ್ಷಿತವೇ. ಇದರ ನಡುವೆ ಇರುವ ಜೀವನವು ತನ್ನನ್ನೂ, ತನ್ನವರನ್ನೂ ಏಳಿಗೆಯತ್ತ ಕೊಂಡೊಯ್ಯಲು ನೀಡಿದ ಕಾಲಾವಕಾಶವಾಗಿದೆ.
Related Articles
Advertisement
ಬಾಲ್ಯದಿಂದಲೇ ನಾವೆಲ್ಲರೂ ಅಂತಹ ಒಬ್ಬ ಸ್ನೇಹಬಂಧುವನ್ನು ನಿರೀಕ್ಷಿಸಿಯೇ ಇರುತ್ತೇವೆ. ತನಗಾದ ಸಂತಸ-ಬೇಸರ, ನಗು-ಅಳು ಎಲ್ಲವನ್ನು ಹಂಚಿಕೊಳ್ಳಲು ಆತ ಅಥವಾ ಆಕೆಯ ಉಪಸ್ಥಿತಿಯನ್ನು ಅಪೇಕ್ಷಿಸುತ್ತೇವೆ. ಒಂದೊಮ್ಮೆ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ “ಜೊತೆ’ಯ ಅನುಪಸ್ಥಿತಿ ಉಂಟಾದಲ್ಲಿ ಆ ಭಾವನೆಗಳು ಮನಸ್ಸೆಂಬ ಗೂಡಿನ ಮೂಲೆಯನ್ನು ಸೇರಿ ಅದೇನೊ ಕಳೆದುಕೊಂಡ ಭಾವನೆ ಉಂಟಾಗುತ್ತದೆ.
ಅಂತಹ ಭಾವನೆಗಳು ಕಂಬನಿಗಳಲ್ಲಿ ವ್ಯಕ್ತವಾದಾಗ ಮನಸ್ಸು ಹಾಗೂ ಹೃದಯ ಬಯಸುವುದು ಕಂಬನಿಗಳನ್ನೊರಿಸುವ ಕೈಗಳನ್ನು, ಅನುಭವವನ್ನು ಕೇಳಿಸಿಕೊಳ್ಳುವ ಕಿವಿಗಳನ್ನು, ಸಂತೈಸುವ ಹಿತವಚನಗಳನ್ನೇ ವಿನಃ ಭಾವನಾರಹಿತ ಉಪಕರಣಗಳನ್ನಲ್ಲ, ಕೈಗಳು ನೀಡುವ ಹಣವನ್ನಲ್ಲ.
ಅಹಂ, ಅಸೂಯೆ, ಅತಿಯಾಸೆಯನ್ನು ಬಿಟ್ಟು ಜೊತೆಗಿರುವ ‘ಜೊತೆ’ಯ ಮುಖದಲ್ಲಿ ಸಂತಸವನ್ನು ಬಯಸಿದರೆ ಅದೇ ನಾವು ಸ್ನೇಹಕ್ಕೆ ನೀಡುವ ಗೌರವ. ನಿಮಗಾಗಿ ಏನು ಮಾಡಲೂ ಸಿದ್ಧವಿರುವ ಸ್ನೇಹಬಂಧು ನಿಮ್ಮಿಂದ ನಿರೀಕ್ಷಿಸುವುದು ವಸ್ತುರೂಪದ ಪ್ರತಿಫಲನ್ನು ಅಲ್ಲ. ಬದಲಿಗೆ ಬೆಲೆ ಕಟ್ಟಲಾಗದ ನಿಮ್ಮ ಸಮಯವನ್ನು.
ಹೌದು, ಈ ಭೂಮಿಯಲ್ಲಿ ಎಲ್ಲಾ ವಸ್ತುಗಳಿಗೆ ಬೆಲೆ ಕಟ್ಟಬಹುದು. ಆದರೆ, ಬೆಲೆ ಕಟ್ಟಲಾಗದಿರುವುದು ಕಣ್ಣಿಗೆ ಕಾಣದ, ಹೃದಯ ಶ್ರೀಮಂತಿಕೆಗೆ ಮಾತ್ರ ಕಾಣುವ “ಭಾವನೆ’ ಗಳಿಗೆ! ನಿಮ್ಮ ಹಿತೈಷಿ ಭಾವನೆಗಳಿಗೆ ಬೆಲೆ ಕೊಡುತ್ತಾನೆಯೇ ಹೊರತು ಬೆಲೆ ಕಟ್ಟಲಾರನು. ಹೀಗಾಗಿ ಜತೆಯ ಆಯ್ಕೆ ಮಾಡುವಾಗ ಜೋಪಾನ, ಸಿಕ್ಕ ಜತೆಯನ್ನು ಸದಾ ಕಾಲ ಮಾಡಿ ಜೋಪಾನ!!!
-ಮಧುರ
ಕಾಂಚೋಡು