Advertisement

ಉದ್ದು-ಹೆಸರು ಬೆಳೆಗೆ ಕೀಟಗಳಕಾಟ: ಆನ್ನದಾತರಲ್ಲಿ ಆತಂಕ

01:45 PM Aug 14, 2020 | Suhan S |

ಚಿಂಚೋಳಿ: ತಾಲೂಕಿನಲ್ಲಿ ಮುಂಗಾರು ಉದ್ದು, ಹೆಸರು ಬೆಳೆಗಳಲ್ಲಿ ಹೇನು ಮತ್ತು ಕೀಟಗಳು ಕಾಣಿಸಿಕೊಂಡಿರುವುದರಿಂದ ರೈತರನ್ನು ಆತಂಕವನ್ನುಂಟು ಮಾಡಿದೆ.

Advertisement

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಹೆಸರು, ಉದ್ದು, ಸೋಯಾಬಿನ್‌ ಬೆಳೆಗಳು ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜೂನ್‌, ಜುಲೈ ತಿಂಗಳಲ್ಲಿ ಬಿರುಸಿನ ಮಳೆ ಆಗಿರುವುದರಿಂದ ಎಲ್ಲ ಗ್ರಾಮಗಳಲ್ಲಿ ಬೆಳೆಗಳು ನಳ ನಳಿಸುತ್ತಿವೆ. ಹೆಸರು, ಹೂವು, ಚೆಳ್ಳಿ, ಕಾಯಿ ಕಟ್ಟುವ ಹಂತದಲ್ಲಿದ್ದು ಬೆಳೆಗಳಲ್ಲಿ ಹೇನಿನ ಭಾದೆ ಕಂಡು ಬರುತ್ತಿದೆ.

ಜೊತೆಗೆ ಉದ್ದಿನ ಬೆಳೆಗಳಲ್ಲಿ ಕೀಟಗಳ ಹಾವಳಿ ಕಂಡು ಬಂದಿರುವುದರಿಂದ ರೈತರು ಹುಳಗಳ ನಿಯಂತ್ರಣಕ್ಕಾಗಿ ಕೀಟನಾಶಕ ಸಿಂಪರಣೆಯಲ್ಲಿ ತೊಡಗಿದ್ದಾರೆ.ಸುಲೇಪೇಟ, ಕೋಡ್ಲಿ, ಚಂದನಕೇರಾ, ಐನಾಪುರ, ಚಿಂಚೋಳಿ, ಚಿಮ್ಮನಚೋಡ, ರಟಕಲ್‌, ಮೋಘಾ, ನಿಡಗುಂದಾ, ಸಾಲೇಬೀರನಳ್ಳಿ, ದೇಗಲಮಡಿ, ಕುಂಚಾವರಂ ಸುತ್ತಲಿನ ಗ್ರಾಮಗಳಲ್ಲಿ ಹೆಸರು, ಉದ್ದು ಬೆಳೆಗಳಿಗೆ ಕೀಟಗಳ ಹಾವಳಿ ಹೆಚ್ಚಾಗುತ್ತಿದೆ. ಅಲ್ಲದೇ ಕೆಲವು ಕಡೆ ಬೆಳೆಗಳಲ್ಲಿ ಮಚ್ಚೆರೋಗ ಕಾಣಿಸಿಕೊಂಡಿದೆ. ಉತ್ತಮ ಬೆಳೆಗಳಿಗೆ ಹೇನು ಮತ್ತು ಕೀಟಗಳ ಹಾವಳಿಯಿಂದಾಗಿ ರೈತರಲ್ಲಿ ನಿರಾಶೆ ಮೂಡಿಸಿದೆ.

ತಾಲೂಕಿನಲ್ಲಿ ಕೆಲ ಗ್ರಾಮಗಳಲ್ಲಿ ಹೆಸರು, ಉದ್ದು, ಸೋಯಾ ಬೆಳೆಗಳಲ್ಲಿ ಹೇನು ಮತ್ತು ಕೀಟಗಳ ಭಾದೆ ಕಂಡು ಬಂದಿದೆ. ರೈತರು ಒಂದು ಲೀಟರ್‌ ನೀರಿಗೆ 1.5 ಲೀಟರ್‌ ಟ್ರೈ ಜೋಫಾಸ್‌ ಸಿಂಪರಣೆ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ರೈತರಿಗೆ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next