Advertisement

INS: ಪತ್ರಿಕೆಗಳು ಸರಕಾರದ ಯೋಜನೆ ತಲುಪಿಸಲಿ: ಪ್ರಧಾನಿ ಮೋದಿ

01:35 AM Jul 16, 2024 | Team Udayavani |

ಹೊಸದಿಲ್ಲಿ: ಮುಂಬಯಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿ (ಬಿಕೆಸಿ) ಸಿದ್ಧವಾಗಿರುವ ಇಂಡಿಯನ್‌ ನ್ಯೂಸ್‌ ಪೇಪರ್‌ ಸೊಸೈಟಿ (ಐಎನ್‌ಎಸ್‌) ಮಾಲಕತ್ವದ ಬಿ-ವಿಂಗ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

Advertisement

ಬಿಕೆಸಿಯ ಐಎನ್‌ಎಸ್‌ ಟವರ್ಸ್‌ನಲ್ಲಿರುವ 14 ಅಂತಸ್ತಿನ ಬಹುಸೌಲಭ್ಯ ಗಳಿರುವ ಈ ಕಟ್ಟಡ ಮುಂಬಯಿ ಮುದ್ರಣ ಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫ‌ಡ್ನವೀಸ್‌, ಅಜಿತ್‌ ಪವಾರ್‌ ಪಾಲ್ಗೊಂಡಿದ್ದರು. ಈ ವೇಳೆ ಮಾತನಾ ಡಿದ ಪ್ರಧಾನಿ ದೇಶದ ಅಭಿವೃದ್ಧಿಯಲ್ಲಿ ಮುದ್ರಣ ಮಾಧ್ಯಮಗಳ ಪಾತ್ರ ವನ್ನು ಹೊಗಳಿದರು.

ಮುಂದಿನ 25 ವರ್ಷಗಳಲ್ಲಿ ದೇಶದ ಬೆಳವಣಿಗೆಯಲ್ಲಿ ಸುದ್ದಿಪತ್ರಿಕೆಗಳ ಪಾತ್ರದ ಬಗ್ಗೆ ಗಮನ ಸೆಳೆದರು. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿ ಸಲು ಪತ್ರಿಕೆಗಳು ನೆರವಾಗಬೇಕು, ಪಕ್ಷೇತರವಾಗಿ ಯೋಚಿಸಬೇಕು ಎಂದರು. ಪತ್ರಿಕೆಗಳು ಅಂತಾರಾಜ್ಯ ಪ್ರವಾಸೋದ್ಯಮವನ್ನು ಉತ್ತೇಜಿಸ
ಬೇಕು, ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಭಾಷೆಗಳಿಗೆ ಸುದ್ದಿಗಳನ್ನು ಅನುವಾದಿಸಬೇಕು, ಜಾಗತಿಕ
ವಾಗಿ ತಲುಪಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next