Advertisement

ಇನ್ನಂಜೆ ಗ್ರಾ.ಪಂ.: ನೀರಿನ ಸಮಸ್ಯೆ ಬಗೆಹರಿದೀತೇ?

02:15 AM Mar 20, 2020 | Sriram |

ಇನ್ನಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೂಲಗಳು ಹಲವಿದ್ದರೂ ಸಮಸ್ಯೆ ಮಾತ್ರ ಶಾಶ್ವತವಾಗಿ ಪರಿಹಾರವಾಗಿಲ್ಲ. ಹಲವಾರು ಯೋಜನೆಗಳು ಈಗಾಗಲೇ ಸಿದ್ಧವಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ಸಮಸ್ಯೆಗೆ ಪರಿಹಾರ ಲಭಿಸಬಹುದು.

Advertisement

ಕಾಪು: ಬೇಸಗೆ ಬಂತೆಂದರೆ ಸಾಕು; ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತದೆ.

ಸದ್ಯ ಸಮಸ್ಯೆ ಪರಿಹಾರಕ್ಕೆ ವಿವಿಧ ಯೋಜನೆಗಳು ಪ್ರಗತಿಯಲ್ಲಿದ್ದರೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಸಮಸ್ಯೆಗೆ ಶಾಶ್ವತ ಅಂತ್ಯ ಕಾಣಬಹುದಾಗಿದೆ.

ಕಳೆದ ವರ್ಷವೂ ಸಮಸ್ಯೆ
ಸದಾಡಿ, ಗಾಂಧಿ ನಗರ, ಸರಸ್ವತಿ ನಗರ, ಮಂಡೇಡಿಯಲ್ಲಿ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲೇ ನೀರಿನ ಅಭಾವ ಕಂಡು ಬಂದಿತ್ತು. ಗೋಳಿಕಟ್ಟೆ ಪರಿಸರದಲ್ಲಿ ಎಪ್ರಿಲ್‌ -ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿತ್ತು. ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಜೋಡಿಸಲು ಗ್ರಾಮ ಪಂಚಾಯತ್‌ ಕಳೆದ ವರ್ಷ ಜಿಲ್ಲಾಧಿಕಾರಿಗಳ ಸೂಚನೆಯಂತೆ ಟೆಂಡರ್‌ ಕರೆದು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿತ್ತು.

ಪ್ರಸಕ್ತ ಸಾಲಿನಲ್ಲಿ ಇದುವರೆಗೆ ನೀರಿನ ಸಮಸ್ಯೆ ಎದುರಾಗಿಲ್ಲ. ಜಿಲ್ಲಾ ಪಂಚಾಯತ್‌ನ ಸಹಕಾರದೊಂದಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಇದರಿಂದಾಗಿ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಲಿದೆ ಎನ್ನುವುದು ನಿರೀಕ್ಷೆಯಾಗಿದೆ.

Advertisement

ನೀರಿನ ಮೂಲಗಳು
ಇನ್ನಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸದಾಡಿ, ಪಾಂಗಾಳ ಸೊಸೈಟಿ ಬಳಿ, ಪಾಂಗಾಳ ರಾ.ಹೆ. 66ರ ಬಳಿ, ಇನ್ನಂಜೆ ರೈಲ್ವೇ ಟ್ರಾÂಕ್‌ ಬಳಿ ತೆರೆದ ಬಾವಿಗಳಿದ್ದು, ಇದರಲ್ಲಿ ರೈಲ್ವೇ ಟ್ರಾÂಕ್‌ ಬಳಿಯ ಸರಕಾರಿ ಬಾವಿಯಿರುವ ಜಾಗವು ರೈಲ್ವೇ ಇಲಾಖೆ ಭೂ ಸ್ವಾಧೀನಕ್ಕೊಳಗಾಗಿರುವುರಿಂದ ಒಂದು ಸರಕಾರಿ ಬಾವಿ ಸಾರ್ವಜನಿಕ ಉಪಯೋಗದಿಂದ ದೂರ ಉಳಿಯಲಿದೆ. ಅಜಿಲಕಾಡು, ಗೋಳಿಕಟ್ಟೆ, ಇನ್ನಂಜೆ, ಮಡುಂಬು, ಕಲ್ಯಾಲು ಮತ್ತು ಮಂಡೇಡಿಯಲ್ಲಿ ಕೊಳವೆ ಬಾವಿಯಿದ್ದು, ಗೋಳಿಕಟ್ಟೆ, ಇನ್ನಂಜೆ, ಕಲ್ಯಾಲು, ಗಾಂಧಿ ನಗರ, ಮಂಡೇಡಿ, ಸದಾಡಿ, ಪಾಂಗಾಳಗುಡ್ಡೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಇದೆ.

ಶಾಶ್ವತ ಪರಿಹಾರಕ್ಕೆ 35 ಲಕ್ಷ ರೂ. ಅನುದಾನ ಬಳಕೆ
ಕಳೆದ ಒಂದು ವರ್ಷದ ಅವಧಿಯಲ್ಲಿ ಇನ್ನಂಜೆ ಗ್ರಾಮಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ 35 ಲಕ್ಷ ರೂ. ಅನುದಾನ ಬಳಕೆಯಾಗಿದೆ. ಈಗಾಗಲೇ ಇನ್ನಂಜೆ ಶಾಲಾ ಮೈದಾನದಲ್ಲಿ 10 ಲಕ್ಷ ರೂ. ವೆಚ್ಚದ ಓವರ್‌ ಹೆಡ್‌ ಟ್ಯಾಂಕ್‌ ರಚನೆಯಾಗಿದ್ದು, ಪಾಂಗಾಳ ಗುಡ್ಡೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ರಚನೆಗೆ ಚಾಲನೆ ದೊರಕಿದೆ. ಕಲ್ಯಾಲುವಿನಲ್ಲಿ 1.75 ಲಕ್ಷ ರೂ. ವೆಚ್ಚದಲ್ಲಿ ರೈಸಿಂಗ್‌ ಲೈನ್‌ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದೆ. ಪಾಂಗಾಳದಲ್ಲಿ 5 ಲಕ್ಷ ರೂ. ವೆಚ್ಚದ ತೆರೆದ ಬಾವಿ ರಚನೆ ಸಹಿತವಾಗಿ 13.75 ಲಕ್ಷ ರೂ. ವೆಚ್ಚದಲ್ಲಿ ಮಂಡೇಡಿಯಲ್ಲಿ ಕೊಳವೆ ಬಾವಿ ತೋಡಲಾಗಿದ್ದು ಅದಕ್ಕೆ ವಿದ್ಯುತ್‌ ಸಂಪರ್ಕ ಜೋಡಿಸಿ ಮತ್ತು ಸದಾಡಿವರೆಗೆ ಪೈಪ್‌ ಲೈನ್‌ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ.

ರೈಸಿಂಗ್‌ ಲೈನ್‌ ಕಾಮಗಾರಿ ಪೂರ್ಣ
ಮಡುಂಬು ಬ್ರಹ್ಮಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿಯಿಂದ ಕಲ್ಯಾಲು ಓವರ್‌ ಹೆಡ್‌ ಟ್ಯಾಂಕ್‌ವರೆಗೆ ಕೊಳವೆ ಬಾವಿಯಿಂದ ನೀರು ಮೇಲೆತ್ತಿ, ಟ್ಯಾಂಕ್‌ಗೆ ನೀರು ತುಂಬುವ 1.75 ಲಕ್ಷ ರೂ. ವೆಚ್ಚದ ರೈಸಿಂಗ್‌ ಲೈನ್‌ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಕರೆಂಟ್‌ ಇದ್ದಾಗ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ತುಂಬಿಸಿ, ಕರೆಂಟ್‌ ಇಲ್ಲದಿದ್ದಾಗ ಗೇಟ್‌ ವಾಲ್‌ ತೆರೆದು ನೀರು ಪೂರೈಕೆ ಮಾಡಬಹುದಾಗಿದೆ.

ಪ್ರತೀ ವರ್ಷ 7 ಲಕ್ಷ ರೂ. ಖರ್ಚು
ಇನ್ನಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಸೇರಿದಂತೆ ಬಾವಿ ಕೊರೆಯುವಿಕೆ, ಶುಚಿತ್ವ, ಪಂಪ್‌ ಫಿಟ್ಟಿಂಗ್‌, ಮೋಟಾರ್‌ ಫಿಟ್ಟಿಂಗ್‌, ಪೈಪ್‌ಲೈನ್‌ ಅಳವಡಿಕೆ, ಪೈಪ್‌ಲೈನ್‌ ನಿರ್ವಹಣೆ, ಬೋರ್‌ವೆಲ್‌ ರಚನೆ ಇತ್ಯಾದಿ ಯೋಜನೆಗಳಿಗೆ ಪ್ರತೀ ವರ್ಷ ಕನಿಷ್ಠ 7 ಲಕ್ಷ ರೂ. ವ್ಯಯಿಸುತ್ತಿದೆ. ಬೇಸಗೆಯಲ್ಲಿ ನೀರಿನ ಅಭಾವ ಕಂಡು ಬರುತ್ತಿದ್ದ ಜಾಗಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗಿದ್ದು, ಇಲ್ಲಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗಾಗಿ 2017-18ರಲ್ಲಿ 87 ಸಾವಿರ ರೂ., 2016 – 17ರಲ್ಲಿ 4.15 ಲಕ್ಷ ರೂ. ಮತ್ತು 2018-19ರಲ್ಲಿ 2.50 ಲಕ್ಷ ರೂ. ಹೆಚ್ಚುವರಿ ಹಣವನ್ನು ವ್ಯಯಿಸಲಾಗಿದೆ.

ಶಾಶ್ವತ ಪರಿಹಾರಕ್ಕೆ
ಜಲ್‌ ಜೀವನ್‌ ಮಿಷನ್‌
ರಾಷ್ಟ್ರೀಯ ಕುಡಿಯುವ ನೀರು ಸರಬರಾಜು (ಎನ್‌.ಆರ್‌.ಡಿ.ಡಬುÉ Â.ಪಿ)ಯೋಜನೆಯು ಈ ವರ್ಷಕ್ಕೆ ತನ್ನ ಕಾರ್ಯ ಚಟುವಟಿಕೆಯನ್ನು ಮುಕ್ತಾಯ ಗೊಳಿಸಲಿದೆ. ಇದಕ್ಕೆ ಪರ್ಯಾಯವಾಗಿ ಕೇಂದ್ರ ಸರಕಾರ ಹೊಸದಾಗಿ ಜಲ್‌ ಜೀವನ್‌ ಮಿಷನ್‌ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯೋಜನೆ ರೂಪಿಸಿದೆ. ಪ್ರತೀ ಮನೆಗೆ ನಳ್ಳಿ ನೀರಿನ ಸಂಪರ್ಕವನ್ನು ಒದಗಿಸುವ ಈ ಯೋಜನೆಗಾಗಿ ಜಿಲ್ಲಾ ಪಂಚಾಯತ್‌ ಇಂಜಿನಿಯರಿಂಗ್‌ ಕುಡಿಯುವ ನೀರಿನ ಸರಬರಾಜು ಇಲಾಖೆ ಈಗಾಗಲೇ ಸರ್ವೆ ಕೆಲಸ ನಡೆಸುತ್ತಿದೆ. ಮುಂದಿನ ವರ್ಷದಿಂದ ಯೋಜನೆ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ.

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ? ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು.

ಹೊಸವ್ಯವಸ್ಥೆ
ಕಳೆದ ವರ್ಷ ನೀರಿನ ಕೊರತೆ ಇರುವಲ್ಲಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕಾಗಿ ಬಂದಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಿ.ಪಂ.ನ ಸಹಕಾರದೊಂದಿಗೆ ನೀರಿನ ಹೊಸ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದಕ್ಕೆ ಮೆಸ್ಕಾಂ ವತಿಯಿಂದ ಸಕಾಲದಲ್ಲಿ ವಿದ್ಯುತ್‌ ಸಂಪರ್ಕ ದೊರೆತರೆ ಈ ಬಾರಿ ಟ್ಯಾಂಕರ್‌ ನೀರು ಸರಬರಾಜು ಪ್ರಮೇಯವೇ ಬರಲಾರದು.
– ರಾಜೇಶ್‌ ಶೆಣೈ
ಪಿಡಿಒ, ಇನ್ನಂಜೆ ಗ್ರಾ.ಪಂ.

- ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next