Advertisement

ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ: ಪಾಟೀಲ

03:43 PM Jun 17, 2020 | Suhan S |

ಮುಳಗುಂದ: ಭೂ ಸುಧಾರಣಾ ಕಾನೂನು, ಎಪಿಎಂಸಿ ಕಾಯ್ದೆ ತಿದ್ದುಪಡಿಯಂಥ ನಿರ್ಧಾರಗಳಿಂದ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

Advertisement

ಯಲಿಶಿರೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸುಧಾರಣಾ ಕಾನೂನು ತರುವ ಮೂಲಕ ಗೇಣಿದಾರರನ್ನು ಭೂ ಒಡೆಯರನ್ನಾಗಿ ಮಾಡಿದ್ದೆವು ನಾವು. ಒಕ್ಕಲಿಗರ ಭೂಮಿಯನ್ನು ಶ್ರೀಮಂತರು ಕಸಿಯಬಾರದು ಎನ್ನುವ ಉದ್ದೇಶದ, ರೈತರನ್ನು ರಕ್ಷಣೆ ಮಾಡುವ ಕಾನೂನು ತಿದ್ದುಪಡಿ ಮಾಡುವುದರಿಂದ ರೈತರ ಭೂಮಿಗೆ ಉಳಿಗಾಲವಿಲ್ಲದಂತಾಗುತ್ತದೆ ಎಂದರು.

ಈಗಗಾಲೇ ರೈತರು ನಾನಾ ಕಾರಣಗಳಿಂದ ಅಡಚಣೆಗೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಬಂಡವಾಳ ಶಾಹಿಗಳು, ಕಪ್ಪುಹಣ ಮಾಡಿರುವವರು ಇಡೀ ಊರನ್ನೇ ಕೊಳ್ಳುವ ಮಟ್ಟದಲ್ಲಿದ್ದಾರೆ. ಇಂಥದರಲ್ಲಿ ಉಳುವವನ ಊರುಗೋಲಾಗಿರುವ ನಮ್ಮ ಭೂಮಿಯನ್ನು ಕಿತ್ತುಉಳ್ಳವವರಿಗೆ ಕೊಡುವ ಕೃತ್ಯ ಇದಾಗಿದೆ. ಈ ಕಾನೂನಿನ ವಿರುದ್ಧ ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ. ಸಾರ್ವಜನಿಕರು, ರೈತರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಸರ್ಕಾರ ಕೂಡಲೇ ಈ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next