Advertisement

ಪುತ್ತೂರಿನಲ್ಲಿ ಚಲನಚಿತ್ರ ಸಪ್ತಾಹ -2017 ಉದ್ಘಾಟನೆ

03:49 PM Nov 18, 2017 | Team Udayavani |

ಪುತ್ತೂರು: ಸದಭಿರುಚಿಯ ಚಲನಚಿತ್ರಗಳಿಂದ ಮಕ್ಕಳಲ್ಲಿ ಜಾಗೃತಿ ಮೂಡುತ್ತವೆ. ಸಪ್ತಾಹದ ಮೂಲಕ ಇಂತಹ ಚಲನಚಿತ್ರಗಳನ್ನು ಪ್ರದರ್ಶ ನಪಡಿಸುತ್ತಿರುವುದು ಉತ್ತಮ ವಿಚಾರ ಎಂದು ಪುತ್ತೂರು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು.

Advertisement

ಅವರು ಶುಕ್ರವಾರ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನ. 17ರಿಂದ 23ರ ತನಕ ನಡೆಯಲಿರುವ ಚಲನಚಿತ್ರ ಸಪ್ತಾಹ -2017ನ್ನು ಉದ್ಘಾಟಿಸಿದರು.

ಒಳ್ಳೆಯ ಸಂದೇಶ ಮತ್ತು ಸದಾಶಯಗಳನ್ನು ಒಳಗೊಂಡಿರುವ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಈ ಬಾರಿಯ ಸಪ್ತಾ ಹದಲ್ಲಿ ಆಯೋಜಿಸುವ ಮೂಲಕ ಸರಕಾರ ಉತ್ತಮ ಕೆಲಸ ಮಾಡಿದೆ ಎಂದು ಅವರು ನುಡಿದರು.

ಮೌಲ್ಯಯುತ ಸಂದೇಶ
ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಮಾತನಾಡಿ, ಸಪ್ತಾಹದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಲನ ಚಿತ್ರಗಳಿಂದ ಮಕ್ಕಳಿಗೆ ಮೌಲ್ಯಯುತ ಸಂದೇಶಗಳನ್ನು ನೀಡಲು ಸಹಕಾರಿಯಾಗಿದೆ. ಗ್ರಾಮಾಂತರ ಪ್ರದೇಶದ ಮಕ್ಕಳು ಈ ಚಿತ್ರ ವೀಕ್ಷಣೆಗೆ ಅವಕಾಶವಾಗುವಂತೆ ಚಿತ್ರಮಂದಿರಕ್ಕೆ ತೆರಳಲು ವಾಹನದ ವ್ಯವಸ್ಥೆಯನ್ನು ಸ್ಥಳೀಯರು ಅಥವಾ ವ್ಯವಸ್ಥಾಪಕರು ಮಾಡಿದ್ದಲ್ಲಿ ಇನ್ನೂ ಹೆಚ್ಚಿನ ಮಕ್ಕಳಿಗೆ ವೀಕ್ಷಣೆಗೆ ಅವಕಾಶವಾಗಲಿದೆ ಎಂದರು.

ಸದುಪಯೋಗಪಡಿಸಿಕೊಳ್ಳಿ
ಪ್ರಾಸ್ತಾವಿಕ ಮಾತುಗಳನ್ನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್‌ ಶಾ, ಸಪ್ತಾಹದಲ್ಲಿ ಪ್ರದರ್ಶ ನವಾಗುತ್ತಿರುವ ಚಲನಚಿತ್ರ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವೀಕ್ಷಣೆ ಉಚಿತವಾಗಿದ್ದು, ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

Advertisement

ನಗರಸಭೆಯ ಸದಸ್ಯರಾದ ಸುವರ್ಣಲತಾ ಹೆಗ್ಡೆ, ಜೆಸಿಂತಾ ಮಸ್ಕರೇನ್ಹಸ್‌, ಅರುಣಾ ಚಿತ್ರ ಮಂದಿರದ ಮಾಲಕ ನವೀನ್‌ ಚಂದ್ರ ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ಸಿಬಂದಿ ಫ್ರಾನ್ಸಿಸ್‌ ಲೂವಿಸ್‌ ಸ್ವಾಗತಿಸಿ, ವಂದಿಸಿದರು.

ಪ್ರದರ್ಶನಗೊಳ್ಳುವ ಚಿತ್ರ 
ನ. 17ರಂದು ಅಮರಾವತಿ ಪ್ರದರ್ಶನಗೊಂಡಿತು. 18ರಂದು ಕಿರಿಕ್‌ ಪಾರ್ಟಿ, 19ರಂದು ರಾಮ ರಾಮ ರೇ, 20ರಂದು ಮದಿಪು (ತುಳು), 21ರಂದು ಯೂ ಟರ್ನ್, 22ರಂದು ಅಲ್ಲಮ ಮತ್ತು 23ರಂದು ಮಾರಿಕೊಂಡವರು ಚಲನಚಿತ್ರ ಪ್ರದರ್ಶವಾಗಲಿದೆ. ಎಲ್ಲ ಪ್ರದರ್ಶನವೂ ಉಚಿತವಾಗಿದೆ ಎಂದು ಬಿ.ಎ. ಖಾದರ್‌ ಶಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next