Advertisement

ಅಭಿವೃದ್ಧಿಗೆ “ಗತಿಶಕ್ತಿ’ಯಿಂದ ನವದಿಶೆ: ಪ್ರಧಾನಿ ಮೋದಿ

10:11 PM Feb 28, 2022 | Team Udayavani |

ನವದೆಹಲಿ: ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಿಂದ ಆಧುನಿಕ ಮೂಲಭೂತ ಸೌಲಭ್ಯ ನಿರ್ಮಾಣಕ್ಕೆ ನವದಿಶೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಈ ವ್ಯವಸ್ಥೆಯ ಮೂಲಕ ಸರಿಯಾದ ಯೋಜನೆ, ಜಾರಿ, ನಿರ್ವಹಣೆ ಮಾಡಲು ಸಾಧ್ಯ. ಹಾಗೆಯೇ ಖರ್ಚು ಮತ್ತು ಸಮಯವನ್ನೂ ಉಳಿಸಬಹುದು ಎಂದಿದ್ದಾರೆ. ಈ ಯೋಜನೆಯಲ್ಲಿ ಉದ್ಯಮಿಗಳು ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕು, ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ಇದನ್ನೂ ಓದಿ:ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ನಟ ನಿಖಿಲ್ ಕುಮಾರಸ್ವಾಮಿ ಕಾಲ್ನಡಿಗೆ

ಬಜೆಟ್‌ಗೆ ಸಂಬಂಧಿಸಿ ನಡೆದ ವೆಬ್‌ ಗೋಷ್ಠಿಯಲ್ಲಿ ಪಾಲ್ಗೊಂಡು ಮೋದಿ ಮೇಲಿನಂತೆ ನುಡಿದರು. ಗತಿಶಕ್ತಿ ಯೋಜನೆಯನ್ನು ಕಳೆದ ವರ್ಷ ಘೋಷಿಸಲಾಗಿತ್ತು. ಯಾವುದೇ ಮೂಲಸೌಕರ್ಯ ನಿರ್ಮಾಣದ ವೇಳೆ ಬೇರೆಬೇರೆ ಇಲಾಖೆಗಳಿಂದ ಎದುರಾಗುವ ಅಡೆತಡೆಗಳನ್ನು ನಿವಾರಿಸಲು, ಅತ್ಯುತ್ತಮವಾದ, ಏಕೀಕೃತವಾದ ರೀತಿಯಲ್ಲಿ ಯೋಜನೆ ಮಾಡಿ, ಜಾರಿ ಮಾಡಲು ಇದನ್ನು ಆರಂಭಿಸಲಾಗಿದೆ. ಇದರ ಮೂಲಕ ಸರ್ಕಾರಿ-ಖಾಸಗಿ ಸಹಭಾಗಿತ್ವವೂ ಹೆಚ್ಚಲಿದೆ.

Advertisement

Udayavani is now on Telegram. Click here to join our channel and stay updated with the latest news.

Next