Advertisement

ಭಾರತದ ಪ್ರಮುಖ ಸಾಫ್ಟ್ ವೇರ್‌ ಕಂಪೆನಿಯಾದ ಇನ್ಫೋಸಿಸ್‌ ರಷ್ಯಾ ಕಚೇರಿ ಬಂದ್‌?

02:35 AM Apr 02, 2022 | Team Udayavani |

ಹೊಸದಿಲ್ಲಿ: ಭಾರತದ ಪ್ರಮುಖ ಸಾಫ್ಟ್ ವೇರ್‌ ಕಂಪೆನಿಯಾದ ಇನ್ಫೋಸಿಸ್‌ ಸಂಸ್ಥೆಯು ರಷ್ಯಾದಲ್ಲಿರುವ ತನ್ನ ಶಾಖೆಯನ್ನು ಮುಚ್ಚಲು ನಿರ್ಧರಿಸಿ ರುವುದಾಗಿ ಬಿಬಿಸಿ ವರದಿ ಮಾಡಿದೆ.

Advertisement

ರಷ್ಯಾವು ಉಕ್ರೇನ್‌ನ ಮೇಲೆ ದಾಳಿ ಆರಂಭಿಸಿದಾಗಿನಿಂದ ಮಾಸ್ಕೋದಲ್ಲಿರುವ ತನ್ನ ಕಚೇರಿಯನ್ನು ಮುಚ್ಚುವ ಬಗ್ಗೆ ಇನ್ಫೋಸಿಸ್‌ ಚಿಂತನೆ ನಡೆಸಿದ್ದು ಅದರಂತೆ ಈಗ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದೇ ಶಾಖೆಯಲ್ಲಿ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಮಗಳಾದ ಅಕ್ಷತಾ ಮೂರ್ತಿ, 3,900 ಕೋಟಿ ರೂ. ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.

ಅಕ್ಷತಾ ಅವರು ಯುನೈಟೆಡ್‌ ಕಿಂಗ್‌ಡಮ್‌ನ ಹಣಕಾಸು ಸಚಿವ ರಿಷಿ ಸುನಕ್‌ರವರ ಪತ್ನಿ. ಉಕ್ರೇನ್‌ ಮೇಲೆ ಯುದ್ಧ ಆರಂಭವಾದ ಅನಂತರ ಯು.ಕೆ. ಸರಕಾರ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಿರುವ ಹಿನ್ನೆಲೆಯಲ್ಲಿ, ಅಕ್ಷತಾ ಅವರು ರಷ್ಯಾದಲ್ಲಿರುವ ಇನ್ಫೋಸಿಸ್‌ ಕಚೇರಿಯಿಂದ ಆದಾಯ ಗಳಿಸುತ್ತಿರುವುದು ವಿವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next