Advertisement

ಭಾರತದ ಪ್ರಸಿದ್ಧ ಟೆಕ್‌ ಸಂಸ್ಥೆಯಾಗಿರುವ ಇನ್ಫೋಸಿಸ್‌ ಆದಾಯ, ಲಾಭ ಏರಿಕೆ

09:37 PM Apr 13, 2022 | Team Udayavani |

ಭಾರತದ ಪ್ರಸಿದ್ಧ ಟೆಕ್‌ ಸಂಸ್ಥೆಯಾಗಿರುವ ಇನ್ಫೋಸಿಸ್‌ 2021-22ರ ನಾಲ್ಕನೇ ತ್ತೈಮಾಸಿಕದ ವರದಿ ಬಿಡುಗಡೆ ಮಾಡಿದೆ.

Advertisement

ಜ. 1ರಿಂದ ಮಾ. 31ರವರೆಗಿನ ತ್ತೈಮಾಸಿಕದಲ್ಲಿ ಸಂಸ್ಥೆಯು 5,686 ಕೋಟಿ ರೂ. ಲಾಭ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ. 12 ಹೆಚ್ಚಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 5,076 ಕೋಟಿ ರೂ. ಲಾಭ ದಾಖಲಾಗಿತ್ತು. ಸಂಸ್ಥೆಯು 2021-22ರ 4ನೇ ತ್ತೈಮಾಸಿಕದಲ್ಲಿ 32,376 ಕೋಟಿ ರೂ. ಆದಾಯ ಕಂಡಿದೆ.

ಅದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 23 ಹೆಚ್ಚಾಗಿದೆ.ಒಟ್ಟಾರೆಯಾಗಿ ಮಾ.31ರಂದು ಅಂತ್ಯವಾದ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 1.21 ಟ್ರಿಲಿಯನ್‌ ರೂ. ಆದಾಯ ಗಳಿಸಿದ್ದು, ಅದರಲ್ಲಿ 22,110 ಕೋಟಿ ರೂ. ಲಾಭವಾಗಿದೆ. 2020-21ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಅದು ಶೇ. 21 ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next