Advertisement

ಇನ್ಫೋಸಿಸ್‌ ಲಾಭಾಂಶದಲ್ಲಿ ಶೇ.1.3ರಷ್ಟು ಏರಿಕೆ

03:10 AM Jul 15, 2017 | Team Udayavani |

ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ ನಡುವೆ ಹಲವು ವಿಚಾರಕ್ಕೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಅದು ಮುಕ್ತಾಯವಾಗಿರುವ ಬೆನ್ನಲ್ಲೇ ಗುರುವಾರ ಬೆಂಗಳೂರಿನಲ್ಲಿ ಹಾಲಿ ಹಣಕಾಸು ವರ್ಷದ ಮೊದಲ ತ್ತೈಮಾಸಿಕ ಸಭೆ ನಡೆಯಿತು. ಅದರದಲ್ಲಿ 3,483 ಕೋಟಿ ರೂ. ಲಾಭ ಪಡೆದುಕೊಂಡಿದೆ. ಅಂದರೆ ಶೇ.1.3ರಷ್ಟು ಹೆಚ್ಚಾಗಿದೆ. ಆದರೆ ಕಳೆದ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.3.3ರಷ್ಟು ಇಳಿಕೆಯಾಗಿದೆ. ಒಟ್ಟಾರೆ ಶೇ.24.1ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಮಾಹಿತಿ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಸಭೆಗೆ ಸಿಇಒ ಸಿಕ್ಕಾ ಮೈಸೂರಿನ ಇನ್ಫಿ ಕ್ಯಾಂಪಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿರುವ ಚಾಲಕರಹಿತ ಕಾರಿನಲ್ಲಿ ಆಗಮಿಸಿದರು.

Advertisement

ಕೃತಕ ಬುದ್ಧಿಮತ್ತೆಯತ್ತ ಗಮನ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನತ್ತ (ಕೃತಕ ಬುದ್ಧಿಮತ್ತೆ) ಗಮನ ಹರಿಸಿದೆ ಎಂದಿದ್ದಾರೆ ವಿಶಾಲ್‌ ಸಿಕ್ಕಾ. ಕಂಪನಿಯ ಗ್ರಾಹಕರಿಗೆ ಸೈಬರ್‌ ಸೆಕ್ಯುರಿಟಿ, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಡೇಟಾ ಸುರಕ್ಷತೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ನೆರವು ನೀಡಿತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next