Advertisement

ಯುದ್ಧದ ಎಫೆಕ್ಟ್ : 4 ತಿಂಗಳಲ್ಲಿ 7.1 ಕೋಟಿ ಮಂದಿಗೆ ಬಡತನ!

11:53 PM Jul 07, 2022 | Team Udayavani |

ದುಬಾೖ : ರಷ್ಯಾ-ಉಕ್ರೇನ್‌ ಯುದ್ಧದಿಂದ ಆ ದೇಶಗಳು ಮಾತ್ರವಲ್ಲ, ಇಡೀ ಜಗತ್ತೇ ಒದ್ದಾಡುತ್ತಿದೆ! ಹಾಗೆಯೇ ರಷ್ಯಾ ಮೇಲೆ ಜಗತ್ತಿನ ಹಲವು ದೇಶಗಳು ನಿರ್ಬಂಧ ಹೇರಿದ್ದವು. ಅದರ ಪರಿಣಾಮ ಕೇವಲ ರಷ್ಯನ್ನರ ಮೇಲಾಗಿಲ್ಲ, ವಿಶ್ವದ ಇತರ ದೇಶಗಳ ಮೇಲೂ ಆಗಿವೆ. ಹಾಗಾಗಿ 7.1 ಕೋಟಿ ಮಂದಿ ಬಡವರ ಪಟ್ಟಿಗೆ ಸೇರಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದಾರ್ಥಗಳು ಮತ್ತು ತೈಲದರ ದುಬಾರಿಯಾಗಿರುವುದು.

Advertisement

ಯುಎನ್‌ಡಿಪಿಯ (ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳು) ಅಂದಾಜಿನ ಪ್ರಕಾರ, ಯುದ್ಧಾರಂಭವಾದ 3 ತಿಂಗಳಿನಲ್ಲೇ 5.16 ಕೋಟಿ ಮಂದಿ ಬಡತನ ರೇಖೆಯ ವ್ಯಾಪ್ತಿಗೆ ಬಂದರು.

ಇವರು ದಿನವೊಂದಕ್ಕೆ ಕೇವಲ 1.90 ಡಾಲರನ್ನು ತಮ್ಮ ಜೀವನಕ್ಕಾಗಿ ವ್ಯಯಿಸುತ್ತಿದ್ದಾರೆ. ಅದಾದ ಮೇಲೆ ಮತ್ತೆ 2 ಕೋಟಿ ಮಂದಿ ಈ ಪಟ್ಟಿ ಸೇರಿಕೊಂಡರು. ಈ ಪಟ್ಟಿಗೆ ಸೇರಿದವರು ದಿನವೊಂದಕ್ಕೆ 3.20 ಡಾಲರ್‌ಗಳನ್ನು ವ್ಯಯಿಸುತ್ತಿದ್ದಾರೆ. ಒಟ್ಟಾರೆ ವಿಶ್ವದ ಜನಸಂಖ್ಯೆಯ ಶೇ. 9 ಮಂದಿ ಬಡತನದ ವ್ಯಾಪ್ತಿಗೆ ಬಂದಿದ್ದಾರೆ. ಉಕ್ರೇನಿನ ಬಂದರುಗಳನ್ನು ಮುಚ್ಚಲಾಗಿದ್ದು, ಧಾನ್ಯಗಳ ರಫ್ತು ನಿಂತಿದೆ. ಇದೂ ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next