Advertisement

ಸೋಂಕು ಪ್ರದೇಶ ಸೀಲ್‌ಡೌನ್‌

05:34 AM Jul 10, 2020 | Team Udayavani |

ಕೊಳ್ಳೇಗಾಲ: ಕೋವಿಡ್‌ 19 ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ 5 ಕೋವಿಡ್‌ 19 ಪಾಸಿಟಿವ್‌ ಬಂದ ಹಿನ್ನೆಲೆ ಯಲ್ಲಿ ಪಟ್ಟಣದ ಸುಬಹ್ಮಣ್ಯೇಶ್ವರ ದೇವಾಲ ಯ ಗುಡಿ ಬೀದಿಯನ್ನು ಅಧಿಕಾರಿಗಳು ಸೀಲ್‌ಡೌನ್‌ ಮಾಡಿದ್ದಾರೆ.

Advertisement

ಪಟ್ಟಣದ ಹೃದಯಭಾಗ ಮತ್ತು ಹೊರವಲಯಗಳಲ್ಲಿ ಕೋವಿಡ್‌ 19 ಹೆಚ್ಚಳದಿಂದ ಸಾರ್ವಜನಿಕರು ಆತಂಕಗೊಂಡು ಮನೆ ಸೇರುವಂತೆ ಆಗಿದ್ದು, ಸೀಲ್‌ಡೌನ್‌ ಪ್ರದೇಶಗಳಿಗೆ ನಗರಸಭೆಯಿಂದ ಔಷಧಿ ಸಿಂಪಡಿಸಿ, ಸಾರ್ವಜನಿಕರು  ರಸ್ತೆಯಲ್ಲಿ ಸಂಚರಿಸದಂತೆ ಸೂಚನೆ ನೀಡಿದರು.

ಪಟ್ಟಣದ ಮಂಜುನಾಥ ನಗರದಲ್ಲಿ ಮೂರು, ಸುಬ್ರಮಣ್ಯೇಶ್ವರ ದೇವಾಲಯ ಬೀದಿಯಲ್ಲಿ 2 ಪಾಸಿಟಿವ್‌ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ 2 ಬಡಾವಣೆಗಳನ್ನು ಅಧಿಕಾರಿಗಳು  ಸೀಲ್‌ಡೌನ್‌ಮಾಡಿ, ಪೊಲೀಸ್‌ ಮತ್ತು ಆರೋಗ್ಯಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಕೋವಿಡ್‌ 19 ಪ್ರದೇಶಕ್ಕೆ ತಹಶೀಲ್ದಾರ್‌ ಕೆ.ಕುನಾಲ್‌, ನಗರಸಭೆ ಪೌರಾಯುಕ್ತ ರವಿ ಕುಮಾರ್‌, ಪಟ್ಟಣ ಠಾಣೆಯ ಎಸ್‌ಐ ರಾಜೇಂದ್ರ, ತಾಲೂಕು  ಆರೋಗ್ಯಾಧಿಕಾರಿ ಡಾ.ಗೋಪಾಲ್‌, ನಗರಸಭೆ ಆರೋಗ್ಯಾಧಿಕಾರಿ ಧನಂಜಯ್‌ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next