Advertisement

ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವುದು ಧರ್ಮ

06:13 PM May 04, 2020 | Naveen |

ಇಂಡಿ: ಶಾಸಕ ಯಶವಂತ್ರಾಯಗೌಡ ಪಾಟೀಲ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಲಾಕ್‌ಡೌನ್‌ದಿಂದ ಕೂಲಿ ಕೆಲಸ ಇಲ್ಲದೇ ಸಂಕಷ್ಟಕ್ಕೊಳಗಾದ ಬಡ ಕುಟುಂಬಗಳಿಗೆ ರವಿವಾರ ದಿನಸಿ ಕಿಟ್‌ ವಿತರಿಸಿದರು. ತನ್ಮೂಲಕ ಕ್ಷೇತ್ರದಲ್ಲಿ ಆಹಾರ ಸಾಮಗ್ರಿ ಕಿಟ್‌ ವಿತರಣೆಗೆ ವಿಧ್ಯುಕ್ತ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಶಾಸಕರು, ಸರ್ಕಾರ ದೇಶದ ಜನರ ಜೀವ ರಕ್ಷಣೆಗಾಗಿ ದೇಶಾದ್ಯಂತ ಲಾಕ್‌ಡೌನ್‌ ಜಾರಿ ಮಾಡಿದೆ. ಇದರಿಂದ ಬಡವರ ಬದುಕು ದುಸ್ತರವಾಗಿದೆ. ಇಂತಹ ಸಂಧರ್ಭದಲ್ಲಿ ನಿಮ್ಮ ಸಹಾಯಕ್ಕೆ ಬರುವುದು ಜನಪ್ರತಿನಿಧಿಯಾದ ನನ್ನ ಧರ್ಮವಾಗಿದೆ. ಕ್ಷೇತ್ರದ 80 ಗ್ರಾಮಗಳ 11 ಸಾವಿರ ಬಡವರು, ನಿರ್ಗತಿಕರಿಗೆ ಆಹಾರ ದಿನಸಿ ಕಿಟ್‌ ವಿತರಿಸಲು ಯೋಜಿಸಲಾಗಿದ್ದು, ಇದಕ್ಕಾಗಿ 33 ಲಕ್ಷ ರೂ. ವ್ಯಯಿಸಲಾಗಿದೆ. ಗ್ರಾಮದ ಮುಖಂಡರು ಬಡವರ ಮನೆಬಾಗಿಲಿಗೆ ಕಿಟ್‌ ತಲುಪಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬೇರೆ ಕಡೆ ದುಡಿಯಲು ಹೋಗಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ಸುಮಾರು 400 ಕುಟುಂಬಗಳ ಸಮಸ್ಯೆಗಳನ್ನು ಶಾಸಕ ಯಶವಂತ್ರಾಯಗೌಡ ಪಾಟೀಲ ಆಲಿಸಿ ಅವರಿಗೆ ದಿನಸಿ ಕಿಟ್‌ ವಿತರಿಸಿದರು. ತಾಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಗ್ರಾಪಂ ಅಧ್ಯಕ್ಷ ವಿಠ್ಠಲ ಗೌಡ ಪಾಟೀಲ, ಜಿಪಂ ಸದಸ್ಯ ಹಣಮಂತ ಖಂಡೇಕಾರ, ಶ್ರೀಕಾಂತ ಕುಡಿಗನೂರ, ಸಿದ್ಧಾರೂಢ ಮರಗೂರ, ಪ್ರಭು ಹೊಸಮನಿ, ಭೀರಪ್ಪ ಪೂಜಾರಿ, ಕಲ್ಲನಗೌಡ ಬಿರಾದಾರ, ಇಲಿಯಾಸ ಬೋರಾಮಣಿ, ಜಾವೀದ ಮೋಮಿನ, ಮಲ್ಲು ಮಡ್ಡಿಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next