Advertisement

ವಿಷ ತ್ಯಾಜ್ಯ ಹರಿಸುವ ಕಾರ್ಖಾನೆಗಳಿಗೆ ಶಾಸಕ ರಾಜಶೇಖರ ಪಾಟೀಲ ಎಚ್ಚರಿಕೆ

04:26 PM Feb 21, 2022 | Team Udayavani |

ಹುಮನಾಬಾದ್ : ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳ ಮಾಲೀಕರು ಕೂಡಲೇ ಸ್ಥಳೀಯರ ಸಮಸ್ಯೆ ಅರೆತುಕೊಳ್ಳಬೇಕು. ವಿಷಯುಕ್ತ ತ್ಯಾಜ್ಯ ಹೊರ ಬಿಡದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಮುಂದಿನ 15 ದಿನಗಳಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸುವ ಮೂಲಕ ಇಡೀ ಕೈಗಾರಿಕಾ ಪ್ರದೇಶದಲ್ಲಿನ ಎಲ್ಲ ಕಾರ್ಖಾನೆಗಳು ಬಂದ್‌ ಮಾಡುವಂತೆ ಸರ್ಕಾರವನ್ನು
ಒತ್ತಾಯಿಸಬೇಕಾಗುತ್ತದೆ ಎಂದು ಶಾಸಕ ರಾಜಶೇಖರ ಪಾಟೀಲ ಕಾರ್ಖಾನೆಗಳ ಮಾಲೀಕರಿಗೆ ಎಚ್ಚರಿಸಿದರು.

Advertisement

ರವಿವಾರ ಪಟ್ಟಣದ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರ್ಖಾನೆಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಅನೇಕ ಕಾರ್ಖಾನೆಗಳು ಪರಿಸರ ಮಾಲಿನ್ಯ ಉಂಟು ಮಾಡುತ್ತಿವೆ.

ಸುತ್ತಲಿನ ಗಡವಂತಿ, ಮಾಣಿಕನಗರ, ಮೋಳಕೇರಾ, ಬಸವಂತಪುರ ಹಾಗೂ ಹುಮನಾಬಾದ ಪಟ್ಟಣಕ್ಕೂ ಅಧಿಕ ಸಮಸ್ಯೆ ಉಂಟಾಗುತ್ತಿದೆ. ಕಾರ್ಖಾನೆಗಳು ಕೂಡಲೇ ಎಚ್ಚೆತ್ತುಕೊಂಡು ಪರಿಸರ ಮಾಲಿನ್ಯ ಹಾಗೂ ಸರ್ಕಾರದ ಮಾರ್ಗಸೂಚಿ ಅನುಸಾರ ಕಾರ್ಖಾನೆಗಳು ನಡೆಸಬೇಕು ಎಂದು ಈ ಹಿಂದೆ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಇದೀಗ ಮತ್ತೆ ಎಲ್ಲ ಕಾರ್ಖಾನೆಗಳಿಗೆ
ಎಚ್ಚರಿಕೆ ನೀಡುತ್ತಿದ್ದು, ಮುಂದಿನ 15 ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಗ್ರಾಮಸ್ಥರೊಂದಿಗೆ ಸೇರಿ ರಸ್ತೆಗೆ ಇಳಿದು ಪ್ರತಿಭಟನೆ, ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಈ ಕುರಿತು ಕೈಗಾರಿಕಾ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಸಂಬಂಧಿ ಸಿದ ಅ ಧಿಕಾರಿಗಳ ತಂಡ ಕಳುಹಿಸುವಂತೆ ಮನವರಿಕೆ ಮಾಡಲಾಗಿದೆ ಎಂದರು.

ಇದನ್ನೂ ಓದಿ : ಎಲ್ಲಾ ಧರ್ಮದ ವಿದ್ಯಾರ್ಥಿಗಳು ಶಾಲೆಯ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು: ಅಮಿತ್ ಶಾ

ಈ ಸಂದರ್ಭದಲ್ಲಿ ಆನಂದರಾಜ ಪ್ರಭು, ಚೇತನರಾಜ ಪ್ರಭು, ತಾಪಂ ಇಒ ಮುರಗೆಪ್ಪಾ, ಡಾ| ಗೋವಿಂದ್‌, ಸಿಪಿಐ ಮಲ್ಲಿಕಾರ್ಜುನ ಯಾತನೂರ್‌, ಪಿಎಸ್‌ಐ ರವಿಕುಮಾರ ನಾಯ್ಕೋಡಿ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next