Advertisement

Budget ಬೆಂಗಳೂರು-ಹೈದ್ರಾಬಾದ್‌ ಮಧ್ಯೆ ಕೈಗಾರಿಕಾ ಕಾರಿಡಾರ್‌

11:19 PM Jul 23, 2024 | Team Udayavani |

ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ 12 ಹೊಸ ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಣೆ ಮಾಡಿದ್ದು ಈ ಪೈಕಿ ಹೈದ್ರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಕೂಡ ಒಂದು. ಈ ಕೈಗಾರಿಕಾ ಕಾರಿಡಾರ್‌ನಿಂದ ಎರಡು ರಾಜಧಾನಿಗಳನ್ನು ಬೆಸೆಯುವ ಕೆಲಸ ಆಗಲಿದೆ.

Advertisement

ಎರಡು ಪ್ರಮುಖ ರಾಜ್ಯಗಳ ನಡುವೆ ನಿರ್ಮಿಸಲು ಉದ್ದೇಶಿಸಲಾಗಿರುವ ಮೆಗಾ ಇಂಡಸ್ಟ್ರಿಯಲ್‌ ಹಬ್ ಇದು. ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆ ಯಿಂದ ಆರಂಭವಾಗಿ ಬೆಂಗಳೂರಿನ ವರೆಗೆ ಇರ ಲಿದೆ. ನ್ಯಾಶನಲ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ ವತಿಯಿಂದ ನಡೆಯುವ ಬೃಹತ್‌ ಯೋಜನೆ ಇದಾಗಿದೆ. ಈ ಕಾರಿಡಾರ್‌ ಬಹುತೇಕ ಆಂಧ್ರಪ್ರದೇಶದಲ್ಲೇ ಸಾಗುವುದರಿಂದ ಕರ್ನಾಟಕಕ್ಕೆ ಆಗುವ ಪ್ರಯೋಜನ ಅಷ್ಟಕ್ಕಷ್ಟೇ ಎನ್ನಲಾಗಿದೆ.

ಇದೇ ವೇಳೆ ವಿಶಾಖಪಟ್ಟಣಂ- ಚೆನ್ನೈ-ಒರ್ವಕಲ್‌- ಹೈದ್ರಾಬಾದ್‌ ಕೈಗಾರಿಕಾ ಕಾರಿಡಾರ್‌ ಕೂಡ ಘೋಷಣೆ ಮಾಡಲಾಗಿದೆ. ಆಂಧ್ರಪ್ರದೇಶ ವನ್ನು ಗಮನದಲ್ಲಿಟ್ಟುಕೊಂಡು ಈ ಎರಡೂ ಕೈಗಾರಿಗಾ ಕಾರಿಡಾರ್‌ಗಳನ್ನು ಘೋಷಿಸಲಾಗಿದೆ. ಇದರಿಂದ ಕೈಗಾರಿಕೆಗಳು, ಉದ್ಯೋಗಗಳು ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next