Advertisement
ಸುಮಾರು ಏಳು ನಿಮಿಷಗಳ ಕಾಲ ಸಂಭವಿಸಿದ ಜ್ವಾಲಾಮುಖಿ ಸ್ಫೋಟಕ್ಕೆ ಉಕ್ಕಿದ ದಟ್ಟ ಹೊಗೆ ಆರು ಸಾವಿರ ಮೀಟರ್ ಎತ್ತರ ತಲುಪಿ ಮೋಡಗಳನ್ನು ಮೀರಿ ಹೋಗಿತ್ತು ಎಂದು ಇಂಡೋನೇಷ್ಯಾದ ತಜ್ಞರು ಹೇಳಿದ್ದಾರೆ.
ಜ್ವಾಲಾಮುಖಿಯಿಂದಾಗಿ ಅಲ್ಲಿನ ಸಾಂಸ್ಕೃತಿಕ ರಾಜಧಾನಿ ಯೋಗ್ಯಾಕಾರ್ತದ ಸಮೀಪವಿರುವ ಮೆರಾಪಿ ಪರ್ವತದ ಸುತ್ತಲ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇಲ್ಲಿನ ಗ್ರಾಮಗಳ ಜನರಿಗೆ ಮೂರು ಕಿ.ಮೀ. ವ್ಯಾಪ್ತಿಯಿಂದ ಆಚೆ ಹೋಗುವಂತೆ ಮತ್ತು ಲಾವಾದ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ಜ್ವಾಲಾಮುಖಿ ಕುರಿತು ಸಂಬಂಧಿಸಿದ ಸಂಸ್ಥೆಯು ಸ್ಥಳೀಯರಿಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ಹೇಳಲಾಗಿದೆ.