Advertisement

‘ಇಂದಿರಾ ಗಾಂಧಿ ದೇಶ ಕಂಡ ಧೀಮಂತ ನಾಯಕಿ’

01:10 PM Nov 02, 2017 | |

ಮಹಾನಗರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶ ಕಂಡ ಧೀಮಂತ ನಾಯಕಿಯಾಗಿದ್ದು, ಅವರ ಆಡಳಿತ ದೇಶದ ಚಿತ್ರಣವನ್ನೇ ಬದಲಿಸಿದೆ. ಆಡಳಿತವನ್ನು ಬಂಡವಾಳಶಾಹಿಗಳ ಹಿಡಿತದಿಂದ ಜನ ಸಾಮಾನ್ಯರ ಬಳಿಗೆ ತಂದುಕೊಟ್ಟ ಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಮಂಗಳವಾರ ನಗರದ ಪಕ್ಷದ ಕಚೇರಿಯಲ್ಲಿ ಜರಗಿದ ದಿವಂಗತ ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಅವರು ಗರೀಬಿ ಹಠಾವೋದಂತಹ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಬಡವರ ಬದುಕಿಗೆ ಬೆಳಕಾಗಿದ್ದಾರೆ. ದೇಶಕ್ಕೆ ಅವರ ಕೊಡುಗೆಯನ್ನು ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಕೆ.ಹರೀಶ್‌ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಬಿ.ಇಬ್ರಾಹಿಂ, ಎ.ಸಿ.ಭಂಡಾರಿ, ಸುರೇಶ್‌ ಬಲ್ಲಾಳ್‌, ಪದ್ಮನಾಭ ನರಿಂಗಾನ, ಎಂ.ಎಸ್‌. ಮಹಮ್ಮದ್‌, ಪ್ರತಿಭಾ ಕುಳಾಯಿ, ಆಶಾ ಡಿ’ಸಿಲ್ವ, ಸಂತೋಷ್‌ಕುಮಾರ್‌ ಶೆಟ್ಟಿ, ಎಂ.ಸಂಜೀವ ಮೊಲಿ, ನಝೀರ್‌ ಬಜಾಲ್‌, ಧರಣೇಂದ್ರ ಕುಮಾರ್‌, ಉಮಾನಾಥ್‌ ಶೆಟ್ಟಿ, ಎಚ್‌.ಎಂ.ಅಶ್ರಫ್‌, ಮಿಥುನ್‌ ರೈ ಉಪಸ್ಥಿತರಿದ್ದರು. ಶಾಹುಲ್‌ ಹಮೀದ್‌ ಸ್ವಾಗತಿಸಿದರು. ಶಾಲೆಟ್‌ ಪಿಂಟೋ ವಂದಿಸಿದರು. ಲೋಕೇಶ್‌ ಹೆಗ್ಡೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next