Advertisement

ಕರಾಚಿಯಲ್ಲಿ ತುರ್ತು ಲ್ಯಾಂಡ್ ಆದ ಹೈದರಾಬಾದ್ ಗೆ ಬರುತ್ತಿದ್ದ ವಿಮಾನ: ಪ್ರಯಾಣಿಕರು ಸುರಕ್ಷಿತ

09:42 AM Jul 17, 2022 | Team Udayavani |

ಹೊಸದಿಲ್ಲಿ: ಶಾರ್ಜಾದಿಂದ ಹೈದರಾಬಾದ್‌ಗೆ ಹಾರುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡ್ ಆದ ಘಟನೆ ನಡೆದಿದೆ. ವಿಮಾನವು ಕರಾಚಿಯಲ್ಲಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Advertisement

” ಶಾರ್ಜಾದಿಂದ ಹೈದರಾಬಾದ್‌ ಗೆ ಬರುತ್ತಿದ್ದ ಇಂಡಿಗೋ ವಿಮಾನ 6E-1406 ಅನ್ನು ಕರಾಚಿಗೆ ತಿರುಗಿಸಲಾಯಿತು. ಪೈಲಟ್ ತಾಂತ್ರಿಕ ದೋಷವನ್ನು ಗಮನಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಕರಾಚಿ ಕಡೆಗೆ ತಿರುಗಿಸಲಾಯಿತು. ಹೈದರಾಬಾದ್‌ ಗೆ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನವನ್ನು ಕರಾಚಿಗೆ ಕಳುಹಿಸಲಾಗುತ್ತಿದೆ” ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ವಾರಗಳಲ್ಲಿ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಿದ ಎರಡನೇ ಭಾರತೀಯ ವಿಮಾನ ಇದಾಗಿದೆ. ಈ ತಿಂಗಳ ಆರಂಭದಲ್ಲಿ, ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್‌ ಜೆಟ್ ವಿಮಾನವು ಪಾಕಿಸ್ತಾನದ ನಗರದಲ್ಲಿ ಅಸಮರ್ಪಕ ಸೂಚಕ ದೀಪದ ಕಾರಣ ಲ್ಯಾಂಡ್ ಮಾಡಲಾಗಿತ್ತು.

ಇದನ್ನೂ ಓದಿ:ಕೊಣಾಜೆ ಠಾಣೆ ಪಕ್ಕದಲ್ಲೇ ಫೈರಿಂಗ್: ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು

138 ಪ್ರಯಾಣಿಕರು ನಂತರ ಭಾರತದಿಂದ ಕಳುಹಿಸಲಾದ ಬದಲಿ ವಿಮಾನದಲ್ಲಿ ದುಬೈಗೆ ತೆರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next