Advertisement

ಮೇ ತಿಂಗಳೊಳಗೆ ದೇಶಿಯ ಕೋವಿಡ್ 19 ಟೆಸ್ಟಿಂಗ್ ಕಿಟ್ಸ್ ಲಭ್ಯವಾಗಲಿದೆ; ಸಚಿವ ಹರ್ಷವರ್ಧನ್

09:47 AM Apr 29, 2020 | Nagendra Trasi |

ನವದೆಹಲಿ: ಕೋವಿಡ್ 19 ಸೋಂಕನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಚೀನಾ ಕಳುಹಿಸಿದ್ದ ರಾಪಿಡ್ ಆ್ಯಂಟಿಬಾಡಿ ಕಿಟ್ಸ್ ಕಳಪೆಯಾಗಿದ್ದು ಈಗಾಗಲೇ ಹಲವು ರಾಜ್ಯಗಳು ಅದನ್ನು ತಿರಸ್ಕರಿಸಿವೆ. ಇದರ ಬೆನ್ನಲ್ಲೇ ದೇಶೀಯ ಕೋವಿಡ್ ಟೆಸ್ಟಿಂಗ್ ಕಿಟ್ಸ್ ಅನ್ನು ಮೇ ನಲ್ಲಿ ನಮಗೆ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಮಂಗಳವಾರ ತಿಳಿಸಿದ್ದಾರೆ.

Advertisement

ಭಾರತ ಮೇ ತಿಂಗಳೊಳಗೆ ಆರ್ ಟಿ-ಪಿಸಿಆರ್ ಮತ್ತು ಆ್ಯಂಟಿಬಾಡಿ ಟೆಸ್ಟ್ ಕಿಟ್ಟ್ ಉತ್ಪಾದಿಸಲು ಸಮರ್ಥವಾಗಿದೆ. ಎಲ್ಲಾ ಪ್ರಕ್ರಿಯೆಗಳು ಪ್ರಗತಿ ಹಂತದಲ್ಲಿದೆ. ಐಸಿಎಂಆರ್ ನಿಂದ ಅನುಮತಿ ದೊರೆತ ಕೂಡಲೇ ಉತ್ಪಾದನೆ ಆರಂಭವಾಗಲಿದೆ ಎಂದು ಹೇಳಿದರು.

ಇಂದು ಬೆಳಗ್ಗೆ ಡಾ.ಹರ್ಷವರ್ಧನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದಿಲ್ಲಿ ಲೆಫ್ಟಿನೆಂಟ್ ಗವರ್ನರ್, ದಿಲ್ಲಿ ಆರೋಗ್ಯ ಸಚಿವರು, ಎಂಸಿಡಿ ಕಮಿಷನರ್, ಎಲ್ಲಾ ಜಿಲ್ಲೆಯ ಡಿಎಂ ಹಾಗೂ ಡಿಸಿಪಿ ಜತೆ ಪುನರ್ ಪರಿಶೀಲನಾ ಸಭೆ ನಡೆಸಿದ್ದರು.

ಭಾರತದಲ್ಲಿ 29,435 ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಇದ್ದು, 6869 ಮಂದಿ ವಲಸಿಗರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next