Advertisement

ಹಣದುಬ್ಬರದ ಏರಿಕೆ ಭೀತಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 3 ದಿನದಲ್ಲಿ 1,600 ಅಂಕ ಇಳಿಕೆ

11:58 AM Jan 20, 2022 | Team Udayavani |

ಮುಂಬಯಿ: ಹಣದುಬ್ಬರ ಮತ್ತು ಫೆಡ್ ದರಗಳ ಏರಿಕೆಯ ಕಳವಳದ ಹಿನ್ನೆಲೆಯಲ್ಲಿ ಗುರುವಾರ(ಜನವರಿ 20) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 600 ಅಂಕಗಳಷ್ಟು ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.

Advertisement

ಇದನ್ನೂ ಓದಿ:ಲಾಕ್‌ ಡೌನ್, ವೀಕೆಂಡ್ ಕರ್ಫ್ಯೂ ಸಿಎಂ ತೀರ್ಮಾನವಲ್ಲ: ಸಚಿವ ಸೋಮಶೇಖರ್

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 600 ಅಂಕಗಳಷ್ಟು ಇಳಿಕೆಯಾಗಿದ್ದು, 59,488.74 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಕಳೆದ 3 ದಿನಗಳಲ್ಲಿ ಸೆನ್ಸೆಕ್ಸ್ 1,600 ಅಂಕಗಳಷ್ಟು ಕುಸಿತ ಕಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 103 ಅಂಕಗಳಷ್ಟು ಕುಸಿತವಾಗಿದ್ದು, 17,834 ಅಂಕಗಳಿಗೆ ಕುಸಿದಿದೆ.

ಸೆನ್ಸೆಕ್ಸ್, ನಿಫ್ಟಿ ಕುಸಿತದ ನಡುವೆಯೂ ಪವರ್ ಗ್ರಿಡ್, ಕೋಲ್ ಇಂಡಿಯಾ, ಭಾರ್ತಿ ಏರ್ ಟೆಲ್ ಲಿಮಿಟೆಡ್, ಎನ್ ಟಿಪಿಸಿ ಲಿ, ಅದಾನಿ ಪೋರ್ಟ್ಸ್, ಮಾರುತಿ ಸುಜುಕಿ ಇಂಡಿಯಾ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಆಟೋ ಲಿಮಿಟೆಡ್, ಇನ್ಫೋಸಿಸ್ ಲಿಮಿಟೆಡ್, ಎಚ್ ಡಿಎಫ್ ಸಿ, ಟಿಸಿಎಸ್, ಡಾ.ರೆಡ್ಡೀಸ್, ಏಷ್ಯನ್ ಪೇಂಟ್ಸ್ ಷೇರುಗಳು ನಷ್ಟ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next