Advertisement

India ಷೇರುಪೇಟೆಗೆ ವಿಶ್ವದಲ್ಲಿ ಈಗ 4ನೇ ಸ್ಥಾನ

12:49 AM Jan 24, 2024 | Team Udayavani |

ಹೊಸದಿಲ್ಲಿ:ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತದ ಷೇರು ಪೇಟೆಯಲ್ಲೂ ವಿಕ್ರಮ ಸಾಧಿಸಿದೆ. ಇದು ವರೆಗೆ ನಾಲ್ಕನೇ ಸ್ಥಾನದಲ್ಲಿ ಇದ್ದ ಹಾಂಕಾಂಗ್‌ ಷೇರುಪೇಟೆಯನ್ನು ಹಿಂದಿಕ್ಕಿ ಆ ಸ್ಥಾನಕ್ಕೆ ಭಾರತ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿರುವುದು ಗಮ ನಾರ್ಹ ಅಂಶವಾಗಿದೆ. ಅಮೆರಿಕ, ಚೀನಾ, ಜಪಾನ್‌ ಕ್ರಮವಾಗಿ ಮೊದಲ, ದ್ವಿತೀಯ, ತೃತೀಯ ಸ್ಥಾನದಲ್ಲಿವೆ.

Advertisement

ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ಅನುಕೂಲಕರವಾಗಿರುವ ನೀತಿಗಳನ್ನು ರಚಿಸಿ ಜಾರಿಗೊಳಿಸುತ್ತಿದೆ. ಇದರಿಂದಾಗಿ ಜಗತ್ತಿನ ಹೂಡಿಕೆದಾರರ ಆಸಕ್ತಿ ಈಗ ಭಾರತೀಯ ಷೇರುಪೇಟೆಯತ್ತ ಹೊರಳಿದೆ ಎಂದು ಬ್ಲೂಮ್‌ಬರ್ಗ್‌ ತನ್ನ ವರದಿಯಲ್ಲಿ ಉಲ್ಲೇಖೀಸಿದೆ. ಹೀಗಾ ಗಿಯೇ, ಮೊದಲ ಬಾರಿಗೆ ನಾಲ್ಕನೇ ಸ್ಥಾನ ದಲ್ಲಿ ಇದ್ದ ಹಾಂಕಾಂಗ್‌ ಷೇರುಪೇಟೆಯನ್ನು ಹಿಂದಿಕ್ಕಿ ಭಾರತ ಆ ಸ್ಥಾನ ಅಲಂಕರಿಸಿದೆ. ದೇಶದ ಷೇರುಪೇಟೆ ಮೌಲ್ಯ 4.33 ಶತಕೋಟಿ ಡಾಲರ್‌ ಆಗಿದೆ. ಐದನೇ ಸ್ಥಾನಕ್ಕೆ ತಳ್ಳ ಲ್ಪಟ್ಟಿರುವ ಹಾಂಕಾಂಗ್‌ ಷೇರುಪೇಟೆಯ ಮೌಲ್ಯ 4.29 ಶತಕೋಟಿ ಡಾಲರ್‌ ಆಗಿದೆ. ಕಳೆದ ವರ್ಷದ ಡಿ.5ರಂದು ಮೊದಲ ಬಾರಿಗೆ ದೇಶದ ಷೇರುಪೇಟೆಯ ಮೌಲ್ಯ ಶತಕೋಟಿ ಡಾಲರ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next