Advertisement

ಜಿಡಿಪಿ ಇಳಿಕೆಗೆ ನೋಟು ರದ್ದು ಕಾರಣ!

03:45 AM Jun 03, 2017 | Team Udayavani |

ಬೀಜಿಂಗ್‌: ಭಾರತದ ಜಿಡಿಪಿ ದರ ಶೇ.6.1ಕ್ಕೆ ಇಳಿಕೆ ಬಗ್ಗೆ ನೋಟು ರದ್ಧತಿಯೇ ಕಾರಣ ಎಂದು ಚೀನಾದ ಪತ್ರಿಕೆಯೊಂದು ಹೇಳಿದೆ. 

Advertisement

ಮೊನ್ನೆಯಷ್ಟೇ ನಾಲ್ಕನೇ ತ್ತೈಮಾಸಿಕದಲ್ಲಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ನಿರೀಕ್ಷಿತ ಶೇ.7.1ರ ಬದಲಾಗಿ ಶೇ.6.1 ದಾಖಲಾಗಿದ್ದಾಗಿ ಹೇಳಲಾಗಿತ್ತು. ಇದರಿಂದ ಪರೋಕ್ಷವಾಗಿ ಚೀನಾ ಆರ್ಥಿಕತೆಯನ್ನು ಹಿಂದಿಕ್ಕುವ ಭಾರತದ ಯತ್ನಕ್ಕೆ ಸೋಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟು ಅಮಾನ್ಯವು ಜಿಡಿಪಿ ಮೇಲೆ ಬೀರಿದ ಪರಿಣಾಮದಿಂದ ಚೀನಾವೇ ಮುಂಚೂಣಿಯಲ್ಲಿರುವಂತೆ ಮಾಡಿದೆ. ಈ ಇಳಿಕೆ ಅತ್ಯಾಶ್ಚರ್ಯಕರವಾಗಿದ್ದು, ಪ್ರಧಾನಿ ಮೋದಿ ಅವರ ಅಪನಗದೀಕರಣದಂತಹ ಹಲವು ಸುಧಾರಣಾ ನೀತಿಯ ಫ‌ಲವಾಗಿದೆ ಎಂದು ಚೀನಾದ ಗ್ಲೋಬಲ್‌ ಟೈಮ್ಸ್‌ ಲೇವಡಿ ಮಾಡಿದೆ. ಅಲ್ಲದೇ ಭಾರತ ಚೀನಾ ಆರ್ಥಿಕತೆ ಆನೆ-ಡ್ರ್ಯಾಗನ್‌ ಹೋರಾಟದಂತಿದ್ದು, ನಾಲ್ಕನೇ ತ್ತೈಮಾಸಿಕದಲ್ಲಿ ಆನೆ ಸೋತಿದೆ ಎಂದು ಅದು ಬಣ್ಣಿಸಿದೆ.  

ಅಲ್ಲದೇ ಭಾರತ ಮಹತ್ವಾಕಾಂಕ್ಷೆಯ ಸುಧಾರಣೆಗಳನ್ನು ಮಾಡುವ ಮೊದಲು ಆರ್ಥಿಕತೆ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಬೇಕಿದೆ. ಅಪನಗದೀಕರಣ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಿದ್ದು ಈಗ ಗೋಚರವಾಗಿದೆ’ ಎಂದು ಅದು ಬೋಧನೆ ಮಾಡಿದೆ. 

ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಜಿಡಿಪಿ ಶೇ.8ಕ್ಕೆ ತಲುಪಲಿದೆ. ಶೇ.6.1ರ ದರ ಸಮಸ್ಥಾಯಿತ್ವದ್ದು. ವರ್ಷಾಂತ್ಯಕ್ಕೆ ಇದು ಶೇ.7.5ರಷ್ಟಾಗಲಿದ್ದು, ಮೋದಿ ಸರ್ಕಾರದ ಅವಧಿ ಮುಕ್ತಾಯದ ವೇಳೆ ಶೇ.8ರಷ್ಟಕ್ಕೆ ತಲುಪಲಿದೆ. ಚೀನಾ ಜಿಡಿಪಿ ದರವೇನೂ ಭಾರೀ ಮುಂದೆ ಹೋಗಿಲ್ಲ. ಅದು ಶೇ.6.9ರಷ್ಟಿದೆ.
– ಅರವಿಂದ ಪನಗಾರಿಯಾ, 
ನೀತಿ ಆಯೋಗದ ಉಪಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next