ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಮುಂದುವರಿದಿ ರುವ ಹಿಂಸಾಚಾರದ ಬಗ್ಗೆ ಭಾರತ ಕಳವಳವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾಕರನ್ನು ರಕ್ಷಿಸಲು ಅಲ್ಲಿನ ಮಧ್ಯಾಂತರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಲೋಕಸಭೆಯಲ್ಲಿ ಶುಕ್ರವಾರ ಮಾತ ನಾ ಡಿದ ವಿದೇಶಾಂಗ ಸಚಿವ ಎಸ್.ಜೈಶಂಕರ್, “ಅಲ್ಪ ಸಂಖ್ಯಾಕರ ರಕ್ಷಣೆ, ಅವರ ಧಾರ್ಮಿಕ ಸ್ವಾತಂತ್ರ್ಯ ಕಾಪಾಡುವುದು ಬಾಂಗ್ಲಾ ಸರಕಾರದ ಕರ್ತವ್ಯ ಎಂದಿ ದ್ದಾರೆ. ಇದಕ್ಕೂ ಮುನ್ನ ಮಾತಾಡಿದ್ದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ಬಾಂಗ್ಲಾ ದಲ್ಲಿನ ಹಿಂಸಾಚಾರವನ್ನು ಭಾರತ ಖಂಡಿಸುತ್ತಿದೆ. ಚಿನ್ಮಯಿ ಕೃಷ್ಣದಾಸ್ ಪ್ರಕರಣದಲ್ಲೂ ಪಾರದರ್ಶಕತೆ ನಿರೀಕ್ಷಿಸುತ್ತಿದ್ದೇವೆ’ ಎಂದರು.
ಬಾಂಗ್ಲಾದಲ್ಲಿ ಚಿನ್ಮಯ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ರದ್ದು
ದೇಶದ್ರೋಹದ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಹಿಂದೂ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್‌ಗೆ ಸೇರಿದ ಬ್ಯಾಂಕ್ ಖಾತೆಗಳನ್ನು 1 ತಿಂಗಳ ಸ್ಥಗಿತಗೊಳಿಸಲು ಬಾಂಗ್ಲಾದೇಶ ಸರಕಾರ ಆದೇಶ ನೀಡಿದೆ. ಇದರ ಜತೆಗೆ ಇಸ್ಕಾನ್ ಜತೆಗೆ ಗುರುತಿಸಿಕೊಂಡಿರುವ 17 ಮಂದಿಯ ಬ್ಯಾಂಕ್ ಖಾತೆಗಳನ್ನೂ ರದ್ದು ಮಾಡಲಾಗಿದೆ. ಈ ಮೂಲಕ ಅಲ್ಲಿ ಹಿಂದುಗಳ ಮೇಲೆ ಗದಾಪ್ರಹಾರ ಮುಂದುವರಿದಂತಾಗಿದೆ.
ಅವರೆಲ್ಲರ ಬ್ಯಾಂಕ್ ಖಾತೆಗಳಲ್ಲಿ ನಡೆಸಲಾಗಿರುವ ಎಲ್ಲ ವಹಿವಾಟುಗಳ ವಿವರ ಸಲ್ಲಿಸುವಂತೆ ಬ್ಯಾಂಕ್‌ಗಳು, ವಿತ್ತೀಯ ಸಂಸ್ಥೆಗಳಿಗೆ ಆದೇಶ ರವಾನಿಸಲಾಗಿದೆ.
ಬಾಂಗ್ಲಾ ಸರಕಾರ ಆಕ್ರೋಶ
ಇದೇ ವೇಳೆ, ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾಕರ ರಕ್ಷಣೆ ವಿಚಾರದಲ್ಲಿ ಭಾರತ ಸರಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಮಧ್ಯಾಂತರ ಸರಕಾರ ಆರೋಪಿಸಿದೆ. ಕಾನೂನು ವಿಭಾಗದ ಸಲಹೆಗಾರ ಆಸಿಫ್ ನಜರುಲ್ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದು ಕೊಂಡಿದ್ದಾರೆ. ಭಾರತದಲ್ಲಿ ಕೂಡ ಅಲ್ಪಸಂಖ್ಯಾಕರಾಗಿ ರುವ ಮುಸ್ಲಿಂ ಸಮುದಾಯದವರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆ ಬಗ್ಗೆ ಭಾರತ ಸರಕಾರ ಮೌನ ವಹಿಸಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಢಾಕಾದಲ್ಲಿ ಇಸ್ಕಾನ್ ವಿರೋಧಿ ಪ್ರತಿಭಟನೆಗಲೂ ನಡೆದಿವೆ.