Advertisement

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

01:42 AM Sep 29, 2024 | Team Udayavani |

ಜಿನೆವಾ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕೆಂಬ ಪ್ರಸ್ತಾವಕ್ಕೆ ಭೂತಾನ್‌ ಮತ್ತು ಪೋರ್ಚುಗಲ್‌ ದೇಶಗಳು ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಬೆಂಬಲ ವ್ಯಕ್ತ ಪಡಿಸಿವೆ. ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ದೇಶಗಳ ಬೆಂಬಲದ ಬೆನ್ನಲ್ಲೇ ಈ ಬೆಳವಣಿಗೆಯು ಭಾರತಕ್ಕೆ ಮತ್ತಷ್ಟು ಬಲ ಹೆಚ್ಚಿಸಿದೆ. ಭದ್ರತಾ ಮಂಡಳಿಯ ಸುಧಾರಣೆ ಹಿತದೃಷ್ಟಿಯಿಂದ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡುವುದು ಸೂಕ್ತ ಎಂದು ಭೂತಾನ್‌ ಪ್ರಧಾನಿ ತ್ಶೇರಿಂಗ್ ಟೋಬ್ಗೆ , ಪೋರ್ಚುಗಲ್‌ ಪ್ರಧಾನಿ ಲೂಯಿಸ್‌ ಮಾಂಟೆನೆಗ್ರೊ ಬೆಂಬಲ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next