Advertisement

ವೇದಗಳ‌ಲ್ಲೂ ಸಾಪೇಕ್ಷ ಸಿದ್ಧಾಂತ ಇತ್ತು

06:00 AM Mar 17, 2018 | |

ಇಂಫಾಲ್‌: ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ ಪ್ರಸ್ತಾಪಿಸಿದ ಸಾಪೇಕ್ಷ ಸಿದ್ಧಾಂತವನ್ನು ಅದಕ್ಕೂ ಮೊದಲೇ ವೇದಗಳಲ್ಲಿ ಪ್ರಸ್ತಾಪಿಸಲಾಗಿತ್ತು ಎಂಬುದು ಇತ್ತೀಚೆಗೆ ನಿಧನರಾದ ಭೌತಶಾಸ್ತ್ರಜ್ಞ ಸ್ಟೀಫ‌ನ್‌ ಹಾಕಿಂಗ್‌ ಹೇಳಿದ್ದರು ಎಂಬುದಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ. ಇಂಫಾಲದಲ್ಲಿ ನಡೆದ 105ನೇ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಅವರು ಮಾತುಗಳನ್ನಾದ್ದಾರೆ. ಆಧುನಿಕ ವಿಜ್ಞಾನದ ಹಲವು ಅಂಶಗಳು ನಮ್ಮ ವೇದದಲ್ಲಿ ಪ್ರಸ್ತಾಪವಾದವುಗಳ ವಿಸ್ತೃತ ರೂಪವಾಗಿವೆ. ನಮ್ಮ ವೇದಗಳು ತುಂಬಾ ಮುಂದಿವೆ ಎಂದು ಅವರು ಹೇಳಿದ್ದಾರೆ. ಸ್ಟೀಫ‌ನ್‌ ಹಾಕಿಂಗ್‌ ಹೇಳಿಕೆಯ ಮೂಲ ಯಾವುದು ಎಂದು ಕೇಳಿದಾಗ, ನೀವೇ ಹುಡುಕಿಕೊಳ್ಳಿ ಎಂದೂ ಅವರು ಸೂಚಿಸಿದ್ದಾರೆ. ಅಲ್ಲದೆ ಈ ಬಗೆ ಮೂಲ ಸಿಗದಿದ್ದರೆ ತನ್ನನ್ನು ಸಂಪರ್ಕಿಸಿ ಎಂದಿದ್ದಾರೆ.

Advertisement

ಲ್ಯಾಬ್‌ನಿಂದ ಲ್ಯಾಂಡ್‌ಗೆ ಸಂಶೋಧನೆ ಸಾಗಲಿ: ವೈಜ್ಞಾನಿಕ ಸಂಶೋಧನೆಗಳು ಲ್ಯಾಬ್‌ನಿಂದ ಲ್ಯಾಂಡ್‌ಗೆ (ಪ್ರಯೋಗಾಲಯದಿಂದ ಕಾರ್ಯಕ್ಷೇತ್ರಕ್ಕೆ) ಸಾಗಬೇಕು. ಆಗಲೇ ವಿಜ್ಞಾನ ಸದ್ಬಳಕೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರದಲ್ಲಿ ನಾವು ಅಭಿವೃದ್ಧಿಗೊಂಡ ದೇಶಗಳ ಸಾಲಿನಲ್ಲಿ ಗುರುತಿಸಿಕೊಳ್ಳಬೇಕು. ಜನ ಬಳಕೆಗೆ ಸೂಕ್ತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನ ಅನುಕೂಲ ಕಲ್ಪಿಸಬೇಕು ಎಂದು ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next