ಬೆಲ್‌ಗ್ರೇಡ್: ಭಾರತೀಯ ಪುರುಷರ ಫ್ರೀಸ್ಟೈಲ್ ಕುಸ್ತಿಪಟುಗಳು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ನಿರ್ವಹಣೆ ನೀಡಿ ನಿರಾಶೆಗೊಳಿಸಿದ್ದಾರೆ. ಪದಕ ಗೆಲ್ಲಲು ವಿಫಲರಾದರಲ್ಲದೇ ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲೂ ಅಸಮರ್ಥರಾದರು.
ಇದಕ್ಕಿಂತಲೂ ನಿರಾಶೆಯ ಸಂಗತಿ ಯೆಂದರೆ ಕುಸ್ತಿಪಟುಗಳು ಅಷ್ಟೊಂದು ಬಲಿಷ್ಠವಲ್ಲದ ರಾಷ್ಟ್ರಗಳ ಕುಸ್ತಿಪಟುಗ ಳೆದುರು ಸೋತಿರುವುದು ಆಗಿದೆ. ಇದರಿಂದ ಕುಸ್ತಿಪಟುಗಳ ಫಿಟ್‌ನೆಸ್ ಸಾಮರ್ಥ್ಯದ ಬಗ್ಗೆಯೆ ಸಂಶಯ ಕಾಣುತ್ತಿದೆ.
79 ಕೆ.ಜಿ. ವಿಭಾಗದಲ್ಲಿ ಸಚಿನ್ ಮೋರ್ ಅವರು ಉತ್ತರ ಮಸೆಡೋನಿ ಯದ ಅಹ್ಮದ್ ಮಗೊಮೆಡೋವ್ ಅವರ ವಿರುದ್ಧ ರೆಪಚೇಜ್ ಸುತ್ತಿನಲ್ಲಿ ಸೋತರು. 65 ಕೆ.ಜಿ. ವಿಭಾಗದಲ್ಲಿ ಅನುಜ್ ಕುಮಾರ್ ಅರ್ಹತಾ ಸುತ್ತಿನಲ್ಲಿಯೇ ಮೆಕ್ಸಿಕೋದ ಆಸ್ಟಿನ್ ಕ್ಲೀ ಗೊಮೆಜ್ ವಿರುದ್ಧ 7-8 ಅಂತರದಿಂದ ಸೋತು ಹೊರಬಿದ್ದರು.
ಭಾರತದ ಪದಕದ ಭರವಸೆ ಅಮಾನ್ ಸೆಹ್ರಾವತ್ 57 ಕೆ.ಜಿ. ವಿಭಾ ಗದ ಕ್ವಾರ್ಟರ್‌ಫೈನಲ್ ಹಂತದಲ್ಲಿ ಹಾಲಿ ವಿಶ್ವ ಚಾಂಪಿಯನ್ ಅಲ್ಬನಿಯಾದ ಝೆಲಿಮ್‌ಖಾನ್ ಅಬಕರೋವ್ ಅವರ ವಿರುದ್ಧ ಸೋತು ಆಘಾತಕ್ಕೆ ಒಳ ಗಾದರು. ಆಬಳಿಕ ರಷ್ಯದ ಕುಸ್ತಿಪಟು ಫೈನಲಿಗೇರು ವಿಫಲರಾದ ಕಾರಣ ಭಾರತೀಯ ಕುಸ್ತಿಪಟುವಿಗೆ ರೆಪಚೇಜ್‌ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ.
70 ಕೆ.ಜಿ.ಯಲ್ಲಿ ಅಭಿಮನ್ಯು ಅರ್ಮೇನಿಯದ ಅರ್ಮಾಭ್ ಆ್ಯಂಡ್ರೆ ಸ್ಯಾನ್ ಅವರ ವಿರುದ್ಧ ತಾಂತ್ರಿಕ ಹಂತದಲ್ಲಿ ಸೋತು ಹೊರಬಿದ್ದರು. ಅವರ ಜತೆ ಆಕಾಶ್ ದಹಿಯ, ನವೀನ್, ಸಂದೀಪ್ ಸಿಂಗ್ ಮಾನ್, ಪೃಥ್ವಿರಾಜ್, ಸಾಹಿಲ್ ಮತ್ತು ಸುಮಿತ್ ಕೂಡ ಸ್ಫರ್ಧೆಯ ವಿವಿಧ ಹಂತಗಳಲ್ಲಿ ಸೋತು ಹೊರಬಿದ್ದರು.
ಭಾರತೀಯ ಕುಸ್ತಿಪಟುಗಳು ತಟಸ್ಥ ಆ್ಯತ್ಲೀಟ್‌ಗಳಾಗಿ ಈ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು. ಕುಸ್ತಿಯ ವಿಶ್ವ ಆಡಳಿತ ಮಂಡಳಿ ಭಾರತೀಯ ಫುಟ್‌ಬಾಲ್ ಫೆಡರೇಶನ್ ಅನ್ನು ನಿಷೇಧಿಸಿದ್ದರಿಂದ ಕುಸ್ತಿಪಟುಗಳು ಭಾರತೀಯ ಧ್ವಜದಡಿ ಸ್ಪರ್ಧಿಸಿಲ್ಲ.
ತಂಡದ ಕೆಲವು ಕುಸ್ತಿಪಟುಗಳು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಸಂಶಯ ಇದೀಗ ಕಾಡುತ್ತಿದೆ. ಸ್ಪರ್ಧೆಗೆ ಆಯ್ಕೆಯಾದ ಕುಸ್ತಿಪಟುಗಳ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಭಾರತೀಯ ಕುಸ್ತಿ ಫೆಡರೇಶನ್ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿತ್ತು ಎಂದು ತಿಳಿದುಬಂದಿದೆ. 65 ಕೆ.ಜಿ. ವಿಭಾಗದ ಕುಸ್ತಿ ಪಟುವೊಬ್ಬರು ಗಾಯಗೊಂಡಿದ್ದರು ಎಂದು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿಎನ್ ಪ್ರಸೂದ್ ಹೇಳಿದ್ದಾರೆ.