Advertisement

2021ರಲ್ಲಿ ಭಾರತದ ಚೊಚ್ಚಲ ಮಾನವಸಹಿತ ಗಗನಯಾನ ಆರಂಭ

10:10 AM Jan 11, 2019 | Team Udayavani |

ಬೆಂಗಳೂರು : ಭಾರತದ ಮೊತ್ತ ಮೊದಲ ಮಾನವ ಸಹಿತದ ಬಾಹ್ಯಾಕಾಶ ಅಭಿಯಾನ ‘ಗಗನಯಾನ’ 2021ರ ಡಿಸೆಂಬರ್‌ನಲ್ಲಿ ಆರಂಭಗೊಳ್ಳಲಿದ್ದು ಈ ಅಭಿಯಾನದಲ್ಲಿ ಓರ್ವ ಮಹಿಳಾ ಗಗನಯಾತ್ರಿ ಇರುತ್ತಾರೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್‌ ಇಂದು ಶುಕ್ರವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದ ಗಗನಯಾನ ಅಭಿಯಾನವು ಮೂವರು ಗಗನಯಾತ್ರಿಗಳನ್ನು ಒಳಗೊಂಡಿರುತ್ತದೆ. ಗಗನಯಾನ ಅಭಿಯಾನಕ್ಕೆಂದೇ ಹೊಸ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ ಎಂದವರು ತಿಳಿಸಿದರು. 

ಗಗನಯಾನ ಅಭಿಯಾನವು 9,023 ಕೋಟಿ ರೂ ವೆಚ್ಚದ ಕಾರ್ಯಕ್ರಮವಾಗಿರುತ್ತದೆ. ಇಸ್ರೋ ತನ್ನ ಸ್ವಸಾಮರ್ಥ್ಯದ ಆಧಾರದಲ್ಲಿ ಭಾರತದ ಚೊಚ್ಚಲ ಗಗನಯಾನ ಅಭಿಯಾನವನ್ನು 2022ರಲ್ಲಿ ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next