Advertisement
ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ, ಹಿಂದು ಮಹಾಸಾಗರ ಸೇರಿದಂತೆ ಆಳ ಸಮುದ್ರದಲ್ಲಿ ಸಂಪರ್ಕ ಸಾಧಿಸಲು ಮತ್ತು ದೂರಸಂಪರ್ಕ ಸೇವೆಗಳು, ಎಟಿಎಂಗಳಿಗೆ ವಿಸ್ಯಾಟ್ ಸಂಪರ್ಕ, ಷೇರು ವಿನಿಮಯ, ಈ-ಆಡಳಿತದ ಅಪ್ಲಿಕೇಷನ್‌ಗಳು, ದೂರಸಂಪರ್ಕ ಅಪ್ಲಿಕೇಷನ್ಸ್‌ಗಳಿಗೆ ಅವಶ್ಯವಿದ್ದಾಗ ಡಾಟಾ ಸಗಟು ರೂಪದಲ್ಲಿ ವರ್ಗಾವಣೆ ಮಾಡಲು ಇದರಿಂದ ಅನುಕೂಲ ಆಗಲಿದೆ. ಯೂರೋಪ್ ಲಾಂಚ್ ಸರ್ವಿಸ್ ಪ್ರೊವೈಡರ್- ಏರಿಯಾನ್‌ಸ್ಪೇಸ್ ರಾಕೆಟ್ ಸಹಯೋಗದಲ್ಲಿ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31ನ್ನು ಫ್ರಾನ್ಸ್‌ನ ಕೌರೋದಲ್ಲಿರುವ ಏರಿಯಾನ್ ಕೇಂದ್ರದಿಂದ ಬುಧವಾರ ಮುಂಜಾನೆ 2.30ಕ್ಕೆ ಉಡಾವಣೆ ಮಾಡಲಾಯಿತು. ಏರಿಯಾನ್-5 ವೆಹಿಕಲ್ ಜತೆಗೆ ಜಿಸ್ಯಾಟ್-31 ಯಾವುದೇ ದೋಷವಿಲ್ಲದೇ 42 ನಿಮಿಷಕ್ಕೆ ತನ್ನ ಕಕ್ಷೆ ಸೇರಿದೆ. ಕಕ್ಷೆ ಸೇರಿದ ನಂತರ ಏರಿಯಾನ್-5 ವೆಹಿಕಲ್‌ನಿಂದ ಜಿಸ್ಯಾಟ್-31 ಬೇರ್ಪಟ್ಟು ಇಸ್ರೋ ನಿಯಂತ್ರಣಕ್ಕೆ ಬಂದಿದೆ. ಉಡಾವಣೆಯ ನಂತರ ಕೌರೋದಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಇಸ್ರೊ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ನಿರ್ದೇಶಕ ಎಸ್. ಪಾಂಡಿಯನ್, ಇದೊಂದು ಅಮೂಲ್ಯವಾದ ಸಾಧನೆ ಎಂದರು. ಜಿಸ್ಯಾಟ್-31ನ್ನು ಕಕ್ಷೆಗೆ ಸೇರಿಸಲು ಸಹಕರಿಸಿದ ಏರಿಯಾನ್ ಸ್ಪೇಸ್‌ಗೂ ಧನ್ಯವಾದ ಸಲ್ಲಿಸಿದರು. ಕು-ಬ್ಯಾಂಡ್ ಹೊಂದಿರುವ ಹೈ-ಪವರ್(ಶಕ್ತಿಶಾಲಿ) ಸಂವಹನ ಉಪಗ್ರಹ ಇದಾಗಿದ್ದು, ಇದರಿಂದ ಸಾಕಷ್ಟು ಉಪಯೋಗ ಮತ್ತು ಸೇವೆ ಸಿಗಲಿದೆ. ಜತೆಗೆ ಅತಿ ಶೀಘ್ರದಲ್ಲಿ ಕಾಲಾವಧಿ ಮುಗಿಯಲಿರುವ ಉಪಗ್ರಹಗಳ ಸ್ಥಾನವನ್ನು ಇದು ತುಂಬಲಿದೆ ಎಂದು ವಿವರಿಸಿದರು. Advertisement
ಜಿಸ್ಯಾಟ್-31 ಯಶಸ್ವಿ ಉಡಾವಣೆ
01:08 AM Feb 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.