Advertisement

ಭಾರತದ ಭವಿಷ್ಯತ್ತಿನ ಆರ್ಥಿಕ ಬೆಳವಣಿಗೆ ಅತ್ಯಂತ ಸದೃಢ: IMF

11:18 AM Jul 18, 2018 | Team Udayavani |

ವಾಷಿಂಗ್ಟನ್‌ : ಏರಿದ ತೈಲ ಬೆಲೆ ಮತ್ತು ಬಿಗಿ ಹಣಕಾಸು ನೀತಿಯಿಂದಾಗಿ ಭಾರತದ ಆರ್ಥಿಕ ಪ್ರಗತಿಯ ಅಂದಾಜನ್ನು 2018-19ರ ಸಾಲಿಗೆ ಸ್ವಲ್ಪ ಮಟ್ಟಿಗೆ ಇಳಿಸಿರುವ ಹೊರತಾಗಿಯೂ ಭಾರತದ ಭವಿಷ್ಯತ್ತಿನ ಆರ್ಥಿಕ ಬೆಳವಣಿಗೆ ಅತ್ಯಂತ ಸದೃಢವಾಗಿದೆ ಎಂದು IMF ಹೇಳಿದೆ. 

Advertisement

2018ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.7.3 ಆಗಲಿದ್ದು 2019ರಲ್ಲಿ ಇದು ಶೇ.7.5 ಆಗಲಿದೆ; ಈ ವರ್ಷ ಎಪ್ರಿಲ್‌ನಲ್ಲಿ ಅಂದಾಜಿಸಲಾಗಿರುವುದಕ್ಕಿಂತ ಇದು ಅನುಕ್ರಮವಾಗಿ ಶೇ.0.1 ಮತ್ತು ಶೇ.0.3ರಷ್ಟು ಕಡಿಮೆ ಎಂದು ಇಂಟರ್‌ನ್ಯಾಶನಲ್‌ ಮಾನಿಟರಿ ಫ‌ಂಡ್‌ (IMF) ಇಂದು ಸೋಮವಾರ ಹೇಳಿದೆ.

ಭಾರತದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿದ್ದು ಇದು ಭವಿಷ್ಯದಲ್ಲಿ ಇನ್ನಷ್ಟು ಸದೃಢವಾಗಲಿದೆ ಎಂದು IMF ಆರ್ಥಿಕ ಸಲಹೆಗಾರ ಮತ್ತು ಸಂಶೋಧನ ವಿಭಾಗದ ನಿರ್ದೇಶ ಮೌರೀಸ್‌ ಆಬ್‌ಸ್‌ಫೆಲ್ಡ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ಭಾರತದ ಆರ್ಥಿಕ ಪ್ರಗತಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಏರುತ್ತಿರುವ ತೈಲಬೆಲೆ. ಭಾರತ ತನ್ನ ತೈಲ ಆವಶ್ಯಕತೆಯ ಶೇ.80ರಷ್ಟು ಪ್ರಮಾಣವನ್ನು ಆಮದಿಸಿಕೊಳ್ಳುತ್ತದೆ. ಇದಲ್ಲದೆ ಪ್ರಕೃತ ಜಾಗತಿಕ ಹಣಕಾಸು ಸ್ಥಿತಿಗತಿ ಬಿಗಿಯಾಗಿರುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ಇವೇ ಕಾರಣಗಳಿಂದಾಗಿ ಎರಡು ಹಣಕಾಸು ವರ್ಷಗಳಲ್ಲಿನ ಭಾರತದ ಆರ್ಥಿಕ ಪ್ರಗತಿಯ ಅಂದಾಜನ್ನು ಸ್ವಲ್ಪಮಟ್ಟಿಗೆ ಇಳಿಸಲಾಗಿದೆ ಎಂದು ಮೌರೀಸ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next