Advertisement

ಭಾರತದ ಮೊದಲ ಮಂಕಿಪಾಕ್ಸ್ ಸೋಂಕಿತ ಗುಣಮುಖ

08:18 PM Jul 30, 2022 | Team Udayavani |

ತಿರುವನಂತಪುರಂ: ಕೇರಳದಲ್ಲಿ ಮಂಕಿಪಾಕ್ಸ್‌ ಸೋಂಕು ಕಾಣಿಸಿಕೊಂಡಿದ್ದ ಮೊದಲನೇ ಸೋಂಕಿತ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.

Advertisement

ತಿರುವನಂತಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ಜು.14ರಂದು ದಾಖಲಾಗಿದ್ದ ಆತನನ್ನು ಶನಿವಾರ ಡಿಸಾcರ್ಜ್‌ ಮಾಡಿ ಮನೆಗೆ ಕಳುಹಿಸಿರುವುದಾಗಿ ರಾಜ್ಯದ ಆರೋಗ್ಯ ಸಚಿವರಾಗಿರುವ ವೀಣಾ ಜಾರ್ಜ್‌ ತಿಳಿಸಿದ್ದಾರೆ.

ಸೋಂಕಿತನಿಗೆ ಕಳೆದ 72 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಮಂಕಿಪಾಕ್ಸ್‌ ಪರೀಕ್ಷೆ ಮಾಡಲಾಗಿದೆ. ಎರಡರಲ್ಲೂ ಆತನಿಗೆ ಸೋಂಕು ಪತ್ತೆಯಾಗಿಲ್ಲ.

ಸೋಂಕಿತನ ದೇಹದಲ್ಲಿನ ಗುಳ್ಳೆಗಳೂ ಗುಣವಾಗಿರುವ ಹಿನ್ನೆಲೆ ಆತನನ್ನು ಮನೆಗೆ ಕಳುಹಿಸಿಕೊಡಲಾಗಿದೆ.

ರಾಜ್ಯದಲ್ಲಿ ಇನ್ನಿಬ್ಬರು ಸೋಂಕಿತರಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿಯೂ ಸಚಿವೆ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next