Advertisement

9 ದಿನ ಮೊದಲೇ ರಫ್ತು ಗುರಿ ಸಾಧನೆ: ಪ್ರಧಾನಿ ಮೋದಿ

02:11 AM Mar 24, 2022 | Team Udayavani |

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶವು ತನ್ನ ಸರಕು ರಫ್ತು ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ವಿತ್ತೀಯ ಅವಧಿಯಲ್ಲಿ 30.59 ಲಕ್ಷ ಕೋಟಿ ರೂ. (400 ಶತಕೋಟಿ ಡಾಲರ್‌) ಮೌಲ್ಯದ ಸರಕುಗಳನ್ನು ಭಾರತವು ರಫ್ತು ಮಾಡಿದ್ದು, “ಆತ್ಮ ನಿರ್ಭರ ಭಾರತ’ದ ಪಯಣದಲ್ಲಿ ಇದೊಂದು ಮಹತ್ವದ ಮೈಲು ಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

Advertisement

ವಿಶೇಷವೆಂದರೆ, ಮಾರ್ಚ್‌ 31ರ ಗಡುವು ಪೂರ್ಣ ಗೊಳ್ಳಲು 9 ದಿನ ಬಾಕಿಯಿರುವಾಗಲೇ ದೇಶವು ಗುರಿ ಸಾಧಿಸಿದೆ. ಹಣಕಾಸು ವರ್ಷವೊಂದರಲ್ಲಿ ರಫ್ತು ಪ್ರಮಾಣ 400 ಶತಕೋಟಿ ಡಾಲರ್‌ ದಾಟಿರುವುದು ಇದೇ ಮೊದಲು. ಇದಕ್ಕೂ ಹಿಂದೆ 2018-19ರಲ್ಲಿ ರಫ್ತು 330.07 ಶತಕೋಟಿ ಡಾಲರ್‌ಗೆ ತಲುಪಿ ದಾಖಲೆ ಬರೆದಿತ್ತು.

ಇದನ್ನೂ ಓದಿ:ಮೂರು ವರ್ಷದಲ್ಲಿ ಅನುಭವ ಮಂಟಪ ಪೂರ್ಣ: ಸಚಿವ ಆರ್‌. ಅಶೋಕ್‌

2021ರ ಎಪ್ರಿಲ್‌ನಿಂದ 2022ರ ಮಾರ್ಚ್‌ ವರೆಗೆ ಭಾರತದ ರಫ್ತು ಪ್ರಮಾಣ ದಲ್ಲಿ ಶೇ.37ರಷ್ಟು ಏರಿಕೆಯಾಗಿದೆ. ಅಂದರೆ ರಫ್ತು 400 ಶತಕೋಟಿ ಡಾಲರ್‌ಗೆàರಿದೆ. 2020-21ರ ವಿತ್ತ ವರ್ಷದಲ್ಲಿ ರಫ್ತು ಪ್ರಮಾಣ 292 ಶತಕೋಟಿ ಡಾಲರ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next