ವಿಶ್ವಸಂಸ್ಥೆ : ನ್ಯಾಯಾಧೀಶ ದಲವೀರ್ ಭಂಡಾರಿ ಅವರು ದ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯ, ಐಸಿಜೆ ಗೆ, ಪುನರಾಯ್ಕೆಯಾಗಿದ್ದಾರೆ.
ಬಲಾಬಲ ಪ್ರದರ್ಶನದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನಕ್ಕೆ ಅಧಿವೇಶನವೇ ಭಂಡಾರಿಯವರ ಬೆಂಬಲಕ್ಕೆ ನಿಂತು ಬಹುಮತ ದೊರಕಿಸಲು ಮುಂದಾದ ಕಾರಣ ಬ್ರಿಟನ್ “ಬಹುಮತಕ್ಕೆ ಮಣಿದು’ ತನ್ನ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್‌ವುಡ್ ಅವರ ಉಮೇದ್ವಾರಿಕೆಯನ್ನು ಹಿಂಪಡೆಯಿತು.
“ನನ್ನನ್ನು ಬೆಂಬಲಿಸಿರುವ ಎಲ್ಲ ರಾಷ್ಟ್ರಗಳಿಗೆ ನಾನು ಕೃತಜ್ಞನಾಗಿದ್ದೇನೆ; ನಿಮಗೆಲ್ಲ ತಿಳಿದಿರುವ ಹಾಗೆ ಇದು ನಿಜಕ್ಕೂ ಒಂದು ದೊಡ್ಡ ಚುನಾವಣೆಯೇ’ ಎಂದು ಪುನರಾಯ್ಕೆಯಾದ ಸಂತಸದಲ್ಲಿ ಭಂಡಾರಿ ಹೇಳಿದರು.
ಬ್ರಿಟನ್‌ಗೆ ವಿಶ್ವಸಂಸ್ಥೆಯ ಕೆಲವು ಶಾಶತ್ವ ಸದಸ್ಯ ರಾಷ್ಟ್ರಗಳ ಬೆಂಬಲ ಇತ್ತು; ಆದರೆ ಬಹುಮತಕ್ಕೆ ಅದು ಮಣಿಯಲೇ ಬೇಕಾಯಿತು. ಆದರೆ ಹಾಗೆ ಮಣಿಯುವಂತಾದದ್ದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರೀ ದೊಡ್ಡ ಹಿನ್ನಡೆ ಎಂದು ತಿಳಿಯಲಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭದ್ರತಾ ಮಂಡಳಿಯ ಸಂಕಲ್ಪಗಳು ನಿರಂತರ ಪರೀಕ್ಷೆಗೆ ಗುರಿಯಾಗುತ್ತಲೇ ಬಂದಿರುವುದರ ಜತೆಗೆ ಈಗ ಅದು ಐಸಿಜೆ ಸ್ಥಾನವನ್ನು ಕಳೆದುಕೊಂಡಿರುವುದು ಬದಲಾದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.