ಹೊಸದಿಲ್ಲಿ: ದೇಶಾದ್ಯಂತ ಈಗಾಗಲೇ 200 ಕೋಟಿಗೂ ಹೆಚ್ಚು ಲಸಿಕೆ (ಮೊದಲ, ಎರಡನೇ ಮತ್ತು ಬೂಸ್ಟರ್) ಡೋಸ್‌ಗಳನ್ನು ನೀಡಲಾಗಿದೆ. ಆದರೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಇನ್ನೂ ಸಾಗಬೇಕಿದೆ.
“ಭಾರತದ ಕೋವಿಡ್ ಲಸಿಕೆ ಕಾರ್ಯಕ್ರಮವು ಇನ್ನೂ ಮುಗಿದಿಲ್ಲ” ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಸರ್ಕಾರದ ಬಳಿ ಇನ್ನೂ 3 ಕೋಟಿ ಲಸಿಕೆ ಡೋಸ್‌ಗಳ ದಾಸ್ತಾನಿದೆ ಎಂದು ವರದಿಯಾಗಿದೆ.
ಸರ್ಕಾರದ ಕೋವಿಡ್ ಲಸಿಕೆ ಕಾರ್ಯಕ್ರಮವು ಅಂತಿಮ ಹಂತದಲ್ಲಿದೆ, ಆದರೆ ಇದು ಇನ್ನೂ ಮುಗಿದಿಲ್ಲ, ಸುಮಾರು ಮೂರು ಕೋಟಿ ಕೋವಿಡ್ 19 ಡೋಸ್ ಗಳು ಇನ್ನೂ ವಿವಿಧ ಕೇಂದ್ರಗಳಲ್ಲಿ ಸರ್ಕಾರದ ಬಳಿ ಲಭ್ಯವಿದೆ. ಇನ್ನೂ ಕೆಲವು ತಿಂಗಳವರೆಗೆ ಈ ಸ್ಟಾಕ್ ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾಕ್ಕಿಂದು ಮೊದಲ ಅಭ್ಯಾಸ ಪಂದ್ಯ: ಟಾಸ್ ಗೆದ್ದ ಆಸ್ಟ್ರೇಲಿಯಾಕ್ಕಿಲ್ಲ ವಾರ್ನರ್ ಬಲ
ನಡೆಯುತ್ತಿರುವ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ನ ಭಾಗವಾಗಿ, ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಇದುವರೆಗೆ ಒಟ್ಟು 219.32 ಕೋಟಿ ಕೋವಿಡ್ -19 ಲಸಿಕೆ ಡೋಸ್‌ಗಳನ್ನು ನಿರ್ವಹಿಸಲಾಗಿದೆ.