Advertisement
ಸ್ಟೀವನ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯ ವಿರುದ್ಧದ ಈ ಸರಣಿ 2016-17ನೇ ಋತುವಿನಲ್ಲಿ ಭಾರತಕ್ಕೆ ತವರಿನಲ್ಲಿ ನಡೆಯಲಿರುವ ನಾಲ್ಕನೇ ಮತ್ತು ಕೊನೆಯ ಸರಣಿ ಆಗಿದೆ. ಹಾಗಾಗಿ ಸರಣಿ ಗೆಲುವಿನ ವಿಶ್ವಾಸವನ್ನು ಭಾರತ ಹೊಂದಿದೆ.
Related Articles
Advertisement
ಅಶ್ವಿನ್ ಕಳೆದ 13 ಪಂದ್ಯಗಳಲ್ಲಿ 78 ವಿಕೆಟ್ ಉರುಳಿಸಿದ್ದಾರೆ. 8 ಬಾರಿ ಐದು ವಿಕೆಟ್‌ಗಳ ಗೊಂಚನ್ನು ಪಡೆದಿದ್ದರೆ ಜಡೇಜ 10 ಪಂದ್ಯಗಳಿಂದ 49 ವಿಕೆಟ್ ಕೆಡಹಿದ್ದಾರೆ. ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡಿಗೆ ಸಿಂಹಸ್ವಪ್ನರಾಗಿದ್ದ ಅಶ್ವಿನ್ ಮತ್ತು ಜಡೇಜ ಇದೀಗ ಆಸ್ಟ್ರೇಲಿಯ ಸವಾಲಿಗೆ ಉತ್ತರಿಸಲು ಸನ್ನದ್ಧರಾಗಿದ್ದಾರೆ.
ಈ ಮೂವರ ಸ್ಥಿರ ನಿರ್ವಹಣೆಯ ಜತೆಗೆ ಮುರಳಿ ವಿಜಯ್, ಚೇತೇಶ್ವರ ಪೂಜಾರ ಮತ್ತು ಇತರ ಬೌಲರ್‌ಗಳ ಬೆಂಬಲದಿಂದ ಭಾರತ ಉತ್ತಮ ಹೋರಾಟ ನೀಡುವ ಸಾಧ್ಯತೆಯಿದೆ.
ಭಾರತವು ಇಬ್ಬರು ವೇಗಿ ಮತ್ತು ಮೂವರು ಸ್ಪಿನ್ನರ್‌ಗಳೊಂದಿಗೆ (ಅಶ್ವಿನ್, ಜಡೇಜ, ಜಯಂತ್ ಯಾದವ್) ಕಣಕ್ಕೆ ಇಳಿಸುವ ಸಾಧ್ಯತೆ ಯಿದೆ. ಈ ಮೂವರು ಇಂಗ್ಲೆಂಡ್ ವಿರುದ್ಧ ಉತ್ತಮ ನಿರ್ವಹಣೆ ನೀಡಿದ್ದರು. ಇದಲ್ಲದೇ ಅಮಿತ್ ಮಿಶ್ರಾ ಬದಲಿಗೆ ತಂಡಕ್ಕೆ ಆಯ್ಕೆಯಾದ ಕುಲದೀಪ್ ಯಾದವ್ ಅವರಿಗೂ ಅವಕಾಶ ನೀಡುವ ನಿರೀಕ್ಷೆಯಿದೆ.
ಡೇವಿಡ್ ವಾರ್ನರ್ ಬಲಆಸ್ಟ್ರೇಲಿಯದ ಬ್ಯಾಟಿಂಗ್ ಬಲ ಆರಂಭಿಕ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಅವಲಂಭಿಸಿದೆ. ಅವರು ಪ್ರತಿ ಬಾರಿಯೂ ತಂಡಕ್ಕೆ ಒಳ್ಳೆಯ ಆರಂಭ ಒದಗಿಸಲು ನೆರವಾಗುತ್ತಾರೆ. ಅವರಿಗೆ ನಾಯಕ ಸ್ಮಿತ್ ಮತ್ತು ಇತರರು ನೆರವಾಗುವ ಸಾಧ್ಯತೆಯಿದೆ. ತಂಡದಲ್ಲಿರುವ ಹಿರಿಯ ಆಟಗಾರ ಶಾನ್ ಮಾರ್ಷ್‌ಗೆ ಭಾರತದಲ್ಲಿ ಮೊದಲ ಬಾರಿ ಟೆಸ್ಟ್ ಅಡುವ ಅವಕಾಶ ಸಿಗಬಹುದು. 33ರ ಹರೆಯದ ಮಾರ್ಷ್ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾರೆ ಎಂಬುದು ಆಯ್ಕೆಗಾರರ ಅಭಿಮತವಾಗಿದೆ. ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಝೆಲ್‌ವುಡ್ ಇಲ್ಲಿನ ಪಿಚ್‌ನ ಲಾಭ ಪಡೆದರೆ ಭಾರತಕ್ಕೆ ಹೆಚ್ಚಿನ ಒತ್ತಡ ಹೇರಬಹುದು. ಮಿಚೆಲ್ ಮಾರ್ಷ್, ಆಫ್ ಸ್ಪಿನ್ನರ್ ನಥನ್ ಲಿಯೋನ್ ಅವರಿಗೆ ಉಪಯುಕ್ತ ಬೆಂಬಲ ನೀಡಬಹುದು. ಸಂಭಾವ್ಯ ತಂಡಗಳು
ಭಾರತ: ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹ, ಆರ್. ಅಶ್ವಿನ್, ರವೀದ್ರ ಜಡೇಜ, ಜಯಂತ್ ಯಾದವ್, ಇಶಾಂತ್ ಶರ್ಮ, ಉಮೇಶ್ ಯಾದವ್. ಆಸ್ಟ್ರೇಲಿಯ: ಡೇವಿಡ್ ವಾರ್ನರ್, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್ (ನಾಯಕ), ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ ಕಾಂಬ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಓ’ಕೀಫ್, ನಥನ್ ಲಿಯೋನ್, ಜೋಶ್ ಹ್ಯಾಝೆಲ್‌ವುಡ್. ಪಂದ್ಯ ಆರಂಭ: ಬೆಳಗ್ಗೆ 9.30
ನೇರ ಪ್ರಸಾರ: ಸ್ಟಾರ್ ನ್ಪೋರ್ಟ್ಸ್ ತವರಿನಲ್ಲಿ ಭಾರತದ ಸಾಧನೆ
ಪುಣೆ: ಇಂಗ್ಲೆಂಡ್ ವಿರುದ್ಧ 2012-13ರಲ್ಲಿ ನಡೆದ ನಾಲ್ಕನೇ ತಥಾ ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿದ ಬಳಿಕ ಭಾರತೀಯ ತಂಡವು ತವರಿನಲ್ಲಿ ಇಷ್ಟರವರೆಗೆ ಯಾವುದೇ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಕಂಡಿಲ್ಲ. ಈ ಅವಧಿಯಲ್ಲಿ ಆಡಲಾದ ಒಟ್ಟು 20 ಟೆಸ್ಟ್‌ಗಳಲ್ಲಿ ಭಾರತ 17ರಲ್ಲಿ ಜಯ ಸಾಧಿಸಿದ್ದರೆ ಮೂರು ಟೆಸ್ಟ್ ಡ್ರಾಗೊಂಡಿದ್ದವು. ಇದು ತವರಿನಲ್ಲಿ ಭಾರತದ ಉತ್ಕೃಷ್ಟ ಸಾಧನೆಯೆಂದು ಹೇಳಬಹುದು. ತವರಿನಲ್ಲಿ ಮತ್ತು ವಿದೇಶದಲ್ಲಿ ಕಳೆದ 20 ಟೆಸ್ಟ್ ಪಂದ್ಯಗಳಲ್ಲಿ ಭಾರತ 15ರಲ್ಲಿ ಜಯ ಸಾಧಿಸಿದ್ದರೆ ಒಂದರಲ್ಲಿ ಸೋಲನ್ನು ಕಂಡಿದೆ. ಇದನ್ನು ಗಮನಿಸಿದರೆ ಆಸ್ಟ್ರೇಲಿಯ ತಂಡ ಭಾರತವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. 2004-05ರಲ್ಲಿ ಆತಿಥ್ಯ ಭಾರತವನ್ನು 2-1ರಿಂದ ಸೋಲಿಸಿದ ಬಳಿಕ ಆಸ್ಟ್ರೇಲಿಯ ತಂಡ ಭಾರತದ ನೆಲದಲ್ಲಿ ಟೆಸ್ಟ್ ಜಯಿಸಿಲ್ಲ. 2004-05ರ ಬಳಿಕ ಆಸ್ಟ್ರೇಲಿಯ ಎರಡು ಬಾರಿ ನಾಲ್ಕು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಮತ್ತು 2012-13ರಲ್ಲಿ ಈ ಹಿಂದೆ ಆಡಿದ ಸರಣಿಯಲ್ಲಿ 4-0 ಅಂತರದಿಂದ ಸೋತಿತ್ತು.