ಹೊಸದಿಲ್ಲಿ : ಗಗನದಲ್ಲಿನ ಭಾರತದ ಆರನೇ ಕಣ್ಣು ಎಂದೇ ವರ್ಣಿತವಾಗಿರುವ, ಭೂವಿಚಕ್ಷಣೆಯ ಕಾರ್ಟೊ ಸ್ಯಾಟ್ 2 ಶ್ರೇಣಿಯ ಉಪಗ್ರಹವು ತಾನು ಚಿತ್ರೀಕರಿಸಿಕೊಂಡ ಮೊದಲ ಬಿಂಬಗಳನ್ನು ಭೂಮಿಗೆ ರವಾನಿಸಿದ್ದು ಅವು ಅದ್ಭುತವಾಗಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ – ಇಸ್ರೋ – ಕಾರ್ಟೊ ಸ್ಯಾಟ್-2 ರವಾನಿಸಿರುವ ಬಿಂಬಗಳನ್ನು ತನ್ನ ಅಧಿಕೃತ ಟ್ವಿಟರ್ ಖಾತೆಗೆ ಅಪ್ ಲೋಡ್ ಮಾಡಿದೆ.
ಕುತೂಹಲಿಗರು ಈ ಚಿತ್ರಗಳನ್ನು ಈ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ : //www.isro.gov.in/pslv-c38-cartosat-2-series-satellite/first-day-im…
ಕಾರ್ಟೊ ಸ್ಯಾಟ್ ಒಟ್ಟು ಎಂಟು ಚಿತ್ರಗಳನ್ನು ರವಾನಿಸಿದೆ. ಇವುಗಳಲ್ಲಿ ರಾಜಸಾœನದ ಕಿಶನ್‌ಗಢ ರೈಲು ನಿಲ್ದಾಣ, ಈಜಿಪ್ಟ್ ನ ಅಲೆಗ್ಸಾಂಡ್ರಿಯಾ ನಗರದ ವಿಹಂಗಮ ನೋಟ, ಕತಾರ್‌ನ ದೋಹಾ ನಗರದ ನೋಟ ಮುಖ್ಯವಾಗಿವೆ. ಕಾರ್ಟೊ ಸ್ಯಾಟ್ ಉಡಾವಣೆಗೊಂಡ ಮೂರು ದಿನಗಳ ಬಳಿಕ, ಅಂದರೆ 2017ರ ಜೂನ್ 26ರಂದು ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.