ಮುಂಬಯಿ: ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ತೀರಾ ಕಳಪೆ ಕ್ಷೇತ್ರರಕ್ಷಣೆ ನಡೆಸಿದ ಭಾರತದ ವನಿತಾ ತಂಡ ಭಾರೀ ಟೀಕೆಗೆ ಗುರಿಯಾಗದೆ. ಕಾಂಗರೂ ನಾಡಿನ ವಿರುದ್ಧ ಸತತ 9 ಸರಣಿ ಸೋಲನುಭವಿಸಲು ಇದು ಕೂಡ ಒಂದು ಕಾರಣ. ಸಹಜವಾಗಿಯೇ ಕೋಚ್ ಅಮೋಲ್ ಮುಜುಮ್ದಾರ್ ಚಿಂತೆಗೀಡಾಗಿದ್ದಾರೆ.
“ಅನುಮಾನವೇ ಇಲ್ಲ, ಬೇರೆಲ್ಲ ವಿಭಾಗಗಳಲ್ಲಿ ನಾವು ಸುಧಾರಿಸುತ್ತಿದ್ದೇವೆ. ಆದರೆ ನಮ್ಮವರ ಕ್ಷೇತ್ರರಕ್ಷಣೆಯೊಂದು ಅಪವಾದ. ಫೀಲ್ಡಿಂಗ್ ಅತ್ಯಂತ ಕಳಪೆ ಆಗಿದೆ. ಶನಿವಾರದ ಪಂದ್ಯದಲ್ಲಿ ಕನಿಷ್ಠ 6 ಕ್ಯಾಚ್‌ಗಳನ್ನು ಕೈಚೆಲ್ಲಲಾಯಿತು. ಈ ಸರಣಿ ಮುಗಿದ ಬಳಿಕ ಫೀಲ್ಡಿಂಗ್ ಸುಧಾರಣೆಯ ನಿಟ್ಟಿನಲ್ಲಿ ನಾವು ಕಠಿನ ಪ್ರಯತ್ನ ಮಾಡಬೇಕಿದೆ’ ಎಂಬುದಾಗಿ ಮುಜುಮಾªರ್ ಹೇಳಿದರು.
ರಿಚಾ ಘೋಷ್ ಅವರ ದಿಟ್ಟ ಬ್ಯಾಟಿಂಗ್ ಹೊರತಾಗಿಯೂ ಭಾರತ ದ್ವಿತೀಯ ಮುಖಾಮುಖೀಯನ್ನು 3 ರನ್ನುಗಳಿಂದ ಸೋತು ಸರಣಿಯನ್ನು ಜೀವಂತವಾಗಿ ಇರಿಸಲು ವಿಫಲವಾಯಿತು. ಇದರೊಂದಿಗೆ ಭಾರತದಲ್ಲಿ ಆಸ್ಟ್ರೇಲಿಯದ ಅಜೇಯ ದಾಖಲೆ ಮುಂದುವರಿಯಿತು.
ಬ್ಯಾಟಿಂಗ್ ಕ್ರಮಾಂಕ ಸಮರ್ಥನೆ
ರಿಚಾ ಘೋಷ್ ಅವರದು ಏಕಾಂಗಿ ಹೋರಾಟವೆನಿಸಿತು. ಅವರಿಗೆ ಇನ್ನೊಂದು ತುದಿಯಲ್ಲಿ ಉತ್ತಮ ಬೆಂಬಲ ಸಿಗಲಿಲ್ಲ. ಅಲ್ಲದೇ ಅಮನ್‌ಜೋತ್ ಕೌರ್‌ಗಿಂತ ಮೊದಲು ಪೂಜಾ ವಸ್ತ್ರಾಕರ್ ಅವರನ್ನು ಬ್ಯಾಟಿಂಗ್‌ಗೆ ಇಳಿಸದ ಕ್ರಮವೂ ಟೀಕೆಗೊಳಗಾಯಿತು. ಪೂಜಾ ಮೊದಲ ಪಂದ್ಯದಲ್ಲಿ ಅಜೇಯ 62 ರನ್ ಮಾಡಿದ್ದರು.
ಆದರೆ ಮುಜುಮಾªರ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. “ಅಮನ್‌ಜೋತ್ ಕೌರ್ ಆಲ್‌ರೌಂಡರ್ ಆಗಿದ್ದಾರೆ. ಅವರದು 7ನೇ ಕ್ರಮಾಂಕ. ಅವರು ಇದಕ್ಕೆ ಫಿಟ್ ಆಗಬೇಕಿದೆ. ಅನಂತರ ಪೂಜಾ ಸರದಿ ಎಂಬುದಾಗಿ ತೀರ್ಮಾನಿಸಿದ್ದೇವೆ. ಅಲ್ಲದೇ ಇಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಕಂಡುಬರಲಿಲ್ಲ’ ಎಂದರು.
ರಿಚಾ ಘೋಷ್ ಅವರನ್ನು 3ನೇ ಕ್ರಮಾಂಕದಲ್ಲೇ ಮುಂದುವರಿ ಸುವುದು ನಮ್ಮ ಯೋಜನೆ ಎಂಬುದಾಗಿಯೂ ಮುಜುಮಾªರ್ ಹೇಳಿದರು. ಅವರ ಪ್ರತಿಭೆ ಬಗ್ಗೆ ನಮಗೆ ವಿಶ್ವಾಸವಿದೆ. ರಿಚಾ ಅತ್ಯುತ್ತಮ ಟಾಪ್-ಆರ್ಡರ್ ಆಟಗಾರ್ತಿ ಎಂದರು.
ದೀಪ್ತಿ ಶರ್ಮ ಅವರ ನಿಧಾನ ಗತಿಯ ಆಟದ ಬಗ್ಗೆ ಮುಜುಮಾªರ್ ಪ್ರತಿಕ್ರಿಯಿಸಲು ಬಯಸಲಿಲ್ಲ. “ಸೋಲಿಗೆ ನಾನು ಯಾರನ್ನೂ ದೂಷಿಸುವುದಿಲ್ಲ. ಒಂದು ಹೆಚ್ಚುವರಿ ಶಾಟ್ ಬಾರಿಸಿದ್ದರೆ ಅಥವಾ ಒಂದೇ ಒಂದು ಹೊಡೆತವನ್ನು ತಡೆದದ್ದಿದ್ದರೆ ಪಂದ್ಯದ ಫಲಿತಾಂಶ ಬೇರೆ ಆಗುತ್ತಿತ್ತು. ಆದರೆ ಇದೊಂದು ಸಾಂ ಕ ಯತ್ನ’ ಎಂದರು.