Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ ಆತಿಥೇಯರ ಶಿಸ್ತಿನ ಹಾಗೂ ಘಾತಕ ಬೌಲಿಂಗ್ ತಲೆನೋವಾಗಿ ಪರಿಣಮಿಸಿತು. 41 ಓವರ್‌ಗಳಲ್ಲಿ 157 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್ ಆಯಿತು. ಜವಾಬಿತ್ತ ಭಾರತ 28.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 160 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ವೇಗಿಗಳಾದ ಜೂಲನ್ ಗೋಸ್ವಾಮಿ ಮತ್ತು ಮಾನ್ಸಿ ಜೋಶಿ ದಕ್ಷಿಣ ಆಫ್ರಿಕಾದ ಅಗ್ರ ಸರದಿಯನ್ನು ನಡುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ತಂಡ ಚೇತರಿಕೆ ಕಂಡಿತೆನ್ನುವಷ್ಟರಲ್ಲಿ ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಘಾತಕ ವಾಗಿ ಪರಿಣಮಿಸಿದರು. ಹೀಗಾಗಿ ತಂಡಕ್ಕೆ ಸವಾಲಿನ ಮೊತ್ತ ಮರೀಚಿಕೆಯಾಗಿ ಪರಿಣಮಿಸಿತು.
Related Articles
Advertisement
ಇದನ್ನೂ ಓದಿ :ಭಾರತದ ಸ್ಟಾರ್ ಚೆಸ್ ಆಟಗಾರ್ತಿ ಕೊನೆರು ಹಂಪಿಗೆ ಬಿಬಿಸಿ ಪ್ರಶಸ್ತಿ
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-41 ಓವರ್‌ಗಳಲ್ಲಿ 157 (ಗುಡಾಲ್ 49, ಲೂಸ್ 36, ಜೂಲನ್ 42ಕ್ಕೆ 4, ರಾಜೇಶ್ವರಿ ಗಾಯಕ್ವಾಡ್ 37ಕ್ಕೆ 3, ಮಾನ್ಸಿ 23ಕ್ಕೆ 2). ಭಾರತ-28.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 160 (ಮಂಧನಾ ಔಟಾಗದೆ 80, ಪೂನಂ ಔಟಾಗದೆ 62, ಶಬಿ°ಮ್ 46ಕ್ಕೆ 1). ಪಂದ್ಯಶ್ರೇಷ್ಠ: ಜೂಲನ್ ಗೋಸ್ವಾಮಿ.
ಮಂಧನಾ ಮಿಂಚಿನ ಆಟ10 ರನ್ ಆಗುವಷ್ಟರಲ್ಲಿ ಜೆಮಿಮಾ ರೋಡ್ರಿಗಸ್ (9) ವಿಕೆಟ್ ಕಳೆದು ಕೊಂಡು ಅಪಾಯಕ್ಕೆ ಸಿಲುಕಿದ ಭಾರತಕ್ಕೆ ಸ್ಮೃತಿ ಮಂಧನಾ- ಪೂನಂ ರಾವತ್ ಸೇರಿಕೊಂಡು ರಕ್ಷಣೆ ಒದಗಿಸಿದರು. ಹರಿಣಗಳ ಬೌಲಿಂಗ್ ಪಡೆಯ ಮೇಲೆ ಸವಾರಿ ಮಾಡಿದ ಈ ಜೋಡಿ ಕೊನೆಯ ತನಕವೂ ಕ್ರೀಸ್ ಬಿಟ್ಟು ಕದಲಲಿಲ್ಲ. ಮುರಿಯದ ದ್ವಿತೀಯ ವಿಕೆಟಿಗೆ ಭರ್ತಿ 150 ರನ್ ಬಾರಿಸಿ ಭಾರತಕ್ಕೆ ಮಹೋನ್ನತ ಜಯವೊಂದನ್ನು ತಂದಿತ್ತರು. ಇದರಲ್ಲಿ ಮಂಧನಾ ಕೊಡುಗೆ ಅಜೇಯ 80 ರನ್. 64 ಎಸೆತಗಳ ಈ ಅತ್ಯಾಕರ್ಷಕ ಆಟದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಮಂಧನಾ ಹೊರತುಪಡಿಸಿ ಈ ಪಂದ್ಯದಲ್ಲಿ ಬೇರೆ ಯಾರಿಂದಲೂ ಸಿಕ್ಸರ್ ದಾಖಲಾಗಲಿಲ್ಲ. ಮಂಧನಾ ಕಳೆದ 5 ಪಂದ್ಯಗಳಲ್ಲಿ ಬಾರಿಸಿದ 4ನೇ ಅರ್ಧ ಶತಕ ಇದಾಗಿದೆ. ಪೂನಂ ರಾವತ್ ಕೊಡುಗೆ 89 ಎಸೆತಗಳಿಂದ 62 ರನ್.