Advertisement

ಶಫಾಲಿ ಆಯ್ಕೆಯಿಂದ ತಂಡಕ್ಕೆ ಲಾಭ: ನಾಯಕಿ ಮಿಥಾಲಿ ರಾಜ್‌

11:14 PM Jun 01, 2021 | Team Udayavani |

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧದ ಮೂರೂ ಮಾದರಿಯ ಕ್ರಿಕೆಟ್‌ ಸರಣಿಗೆ ಶಫಾಲಿ ವರ್ಮ ಆಯ್ಕೆಯಾದುದನ್ನು ನಾಯಕಿ ಮಿಥಾಲಿ ರಾಜ್‌ ಸ್ವಾಗತಿಸಿದ್ದಾರೆ.

Advertisement

“ಸ್ಫೋಟಕ ಆಟಗಾರ್ತಿ ಶಫಾಲಿ ಮೂರು ಮಾದರಿಯ ಸರಣಿಗೆ ಆಯ್ಕೆಯಾದ್ದರಿಂದ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ. ಟೆಸ್ಟ್‌ ಹಾಗೂ ಏಕದಿನ ಪಂದ್ಯಗಳಲ್ಲಿ ಅವರ ಆಟವನ್ನು ನೋಡಲು ಕಾತರಗೊಂಡಿದ್ದೇವೆ.

ಕಿರಿಯ ಆಟಗಾರರೊಂದಿಗೆ ನಮ್ಮ ಅನುಭವಗಳನ್ನು ಹಂಚಿಕೊಳ್ಳುವುದು ಮಹತ್ವದ ಸಂಗತಿ’ ಎಂದು ಮಿಥಾಲಿ ರಾಜ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next