Advertisement

ಬ್ರಾವೊ ಆಲ್ಬಂಗೆ ಹಾಕಿಪಟುಗಳ ನರ್ತನ; ವೀಡಿಯೋ ವೈರಲ್‌

11:23 PM Dec 20, 2022 | Team Udayavani |

ಹೊಸದಿಲ್ಲಿ: ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ಚೊಚ್ಚಲ “ಎಫ್ಐಎಚ್‌ ನೇಶನ್ಸ್‌ ಕಪ್‌ ಹಾಕಿ’ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಭಾರತೀಯ ವನಿತಾ ಹಾಕಿ ತಂಡ ತವರಿಗೆ ಆಗಮಿಸಿದೆ. ಕ್ರಿಕೆಟರ್ ಬ್ರಾವೊ ಬ್ರದರ್ ಅವರ “ಚಾಂಪಿಯನ್‌’ ಆಲ್ಬಂ ಹಾಡಿಗೆ ಕುಣಿಯುತ್ತ, ತಾವು ಗೆದ್ದ ಚಿನ್ನದ ಪದಕಗಳನ್ನು ಪ್ರದರ್ಶಿಸುತ್ತ ಬರುತ್ತಿರುವ ವೀಡಿಯೋ ವೈರಲ್‌ ಆಗಿದೆ.

Advertisement

ಸವಿತಾ ಪುನಿಯ ನೇತೃತ್ವದ ಭಾರತೀಯ ವನಿತಾ ಹಾಕಿ ತಂಡ ಫೈನಲ್‌ನಲ್ಲಿ ಆತಿಥೇಯ ಸ್ಪೇನ್‌ಗೆ 1-0 ಅಂತರದ ಆಘಾತವಿಕ್ಕಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು. 6ನೇ ನಿಮಿಷದಲ್ಲೇ ಗುರ್ಜಿತ್‌ ಕೌರ್‌ ಈ ಪಂದ್ಯದ ಏಕೈಕ ಗೋಲು ಬಾರಿಸಿದ್ದರು.


ಈ ಗೆಲುವಿನಿಂದ ಭಾರತ ತಂಡ 2023-24ರ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಸಂಪಾದಿಸಿದೆ. ಮುಂದಿನ ವರ್ಷದ ಏಷ್ಯಾಡ್‌ ಹಾಗೂ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಹಿನ್ನೆಲೆಯಲ್ಲಿ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯ ಫ‌ಲಿತಾಂಶ ನಿರ್ಣಾಯಕವಾಗಲಿದೆ.

ಸೆಮಿಫೈನಲ್‌ನಲ್ಲಿ ಭಾರತ ತಂಡ ಐರ್ಲೆಂಡ್‌ ವಿರುದ್ಧ ಶೂಟೌಟ್‌ನಲ್ಲಿ 2-1 ಗೆಲುವು ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next