Advertisement
ಘಟನೆ ಹಿನ್ನೆಲೆ: ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು ಫೇಸ್ ಬುಕ್ ನಲ್ಲಿ ಪರಿಚಯವಾಗಿರುವ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕ್ ಗೆ ತಲುಪಿದ್ದರು. ಆಕೆ ಪ್ರಯಾಣದ ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಪಾಕಿಸ್ತಾನಕ್ಕೆ ತಲುಪಿದ್ದಾಳೆ. ಅಂಜು ವಾಟ್ಸಾಪ್ ಮೂಲಕ ಕರೆ ಮಾಡಿ ನಾನು ಲಾಹೋರ್ ನಲ್ಲಿದ್ದೇನೆ. 3-4 ದಿನದಲ್ಲಿ ಬರುವುದಾಗಿ ಹೇಳಿದ್ದಳು ಎಂದು ಆಕೆಯ ಪತಿ ಅರವಿಂದ್ ಮಾಧ್ಯಮಕ್ಕೆ ತಿಳಿಸಿದ್ದರು.
Related Articles
Advertisement
ಮಲಕಂದ್ ವಿಭಾಗದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ ಅವರು ಅಂಜು (35) ಮತ್ತು ನಸ್ರುಲ್ಲಾ (29) ಅವರ ನಿಕಾಹ್ ಆಗಿದ್ದು ನಿಜವೆಂದಿದ್ದಾರೆ. ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೋರ್ಟ್ ನಲ್ಲಿ ಮದುವೆಯಾದ ಬಳಿಕ ಪೊಲೀಸ್ ಭದ್ರತೆಯಲ್ಲಿ ಅಂಜು ಅವರನ್ನು ಗಂಡನ ಮನೆಗೆ ಕರೆದುಕೊಂಡು ಹೋಗಲಾಯಿತೆಂದು ವರದಿ ತಿಳಿಸಿದೆ.
ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20 ರ ರಂದು ನಾನು ಭಾರತಕ್ಕೆ ಬರುತ್ತೇನೆ. ನಸ್ರುಲ್ಲಾ ಅವರೊಂದಿಗೆ ವಿವಾಹವಾಗುವ ಯೋಜನೆ ಇಲ್ಲವೆಂದು ಮಾಧ್ಯಮಗಳಿಗೆ ಅಂಜು ಹೇಳಿದ್ದರು.
ನಸ್ರುಲ್ಲಾ ಅವರು ಕೂಡ ಅಂಜು ಜೊತೆ ವಿವಾಹವಾಗುವ ವಿಚಾರ ಸುಳ್ಳು. ನಾವು ಇಬ್ಬರು 2019 ರಿಂದ ಫೇಸ್ ಬುಕ್ ಸ್ನೇಹಿತರು ಅಷ್ಟೇ. ಅವರು ಶೀಘ್ರದಲ್ಲಿ ಅವರ ದೇಶಕ್ಕೆ ಹೋಗಲಿದ್ದಾರೆ. ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಅಂಜು ಅವರ ಮನೆಯ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಫೋನಿನ ಮೂಲಕ ಪಿಟಿಐಗೆ ಹೇಳಿದ್ದರು.