Advertisement

ಬಡ್ಡಿದರ ಮತ್ತೆ ಹೆಚ್ಚಿಸಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌?

11:36 PM Jun 05, 2022 | Team Udayavani |

ಮುಂಬಯಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ಯ ಹಣಕಾಸು ನೀತಿ ಸಮಿತಿ (ಎಂಪಿಸಿ) ಸೋಮ ವಾರದಿಂದ ಮೂರು ದಿನಗಳ ಕಾಲ ಹಣಕಾಸು ನೀತಿ ಸಭೆ ನಡೆಸಲಿದ್ದು, ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಮೂಲ ಬಡ್ಡಿದರಗಳನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ.

Advertisement

ಸಭೆಯ ನಿರ್ಣಯಗಳನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಬುಧವಾರ ಪ್ರಕಟಿಸುವರು.

ಬಡ್ಡಿದರ ಏರಿಕೆ ಬಗ್ಗೆ ಶಕ್ತಿಕಾಂತ್‌ ದಾಸ್‌ ಈಗಾಗಲೇ ಮುನ್ಸೂಚನೆ ನೀಡಿದ್ದಾರೆ.

ಬಡ್ಡಿದರವನ್ನು 35 ಮೂಲಾಂಶ (ಬಿಪಿಎಸ್‌)ಗಳಷ್ಟು ಹೆಚ್ಚಳ ಮಾಡುವ ನಿರ್ಣಯವನ್ನು ಆರ್‌ಬಿಐ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next