ಜೈಸಲ್ಮೇರ್ : ಸುಮಾರು 27 ವರ್ಷಗಳ ಹಿಂದೆ ಭಾರತದ ಗಡಿ ದಾಟಿ ಪಾಕಿಸ್ಥಾನವನ್ನು ಪ್ರವೇಶಿಸಿದ್ದ 55 ವರ್ಷ ಪ್ರಾಯದ ವ್ಯಕ್ತಿ ಕಾನೂನುಬಾಹಿರ ಮಾರ್ಗದ ಮೂಲಕ ಭಾರತಕ್ಕೆ ವಾಪಸಾಗಿದ್ದು ಆತನನ್ನು ಗುಪ್ತಚರ ದಳ ತನ್ನ ವಶಕ್ಕೆ ತೆಗೆದುಕೊಂಡಿದೆ.
ಗುಪ್ತಚರ ದಳದ ವಶದಲ್ಲಿರುವ ಹಸನ್ ಖಾನ್ ಆರು ತಿಂಗಳ ಹಿಂದೆ ಈ ವರ್ಷ ಎಪ್ರಿಲ್‌ನಲ್ಲಿ ಭಾರತಕ್ಕೆ ಮರಳಿದ್ದ.
ಇಷ್ಟು ತಿಂಗಳೂ ಆತ ಅಧಿಕಾರಿಗಳ ಕಣ್ತಪ್ಪಿಸಿ ಗುಜರಾತ್ ಮತ್ತು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಅಡಗಿಕೊಂಡಿದ್ದ.
1990ರಲ್ಲಿ ಭಾರತ-ಪಾಕ್ ಗಡಿ ದಾಟಲು ಹಸನ್ ಕಾನೂನು ಬಾಹಿರ ಏಜಂಟರುಗಳಿಗೆ 5,000 ಪಾಕಿಸ್ಥಾನೀ ರೂಪಾಯಿಗಳನ್ನು ಕೊಟ್ಟಿದ್ದ . ಪಾಕಿಸ್ಥಾನದ ಅಮರ್‌ಕೋಟ್ ಜಿಲ್ಲೆಯಲ್ಲಿನ ಖರಾಡೋ ಎಂಬ ಗ್ರಾಮದಲ್ಲಿರುವ ಅನಾರೋಗ್ಯ ಪೀಡಿತನಾಗಿರುವ ತನ್ನ ಅಣ್ಣನನ್ನು ಕಾಣಲು ಆತ ಹೋಗಿದ್ದ.
ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ಹಸನ್‌ನನ್ನು ಈಗ ರಾ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.