ನವದೆಹಲಿ: ಭಾರತದಲ್ಲಿ ತಯಾರಾದ ಚಹಾಪುಡಿಯಲ್ಲಿ ಅನುಮತಿ ನೀಡಲಾಗಿರುವ ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿ ಕೀಟನಾಶಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ಕಳುಹಿಸಲಾಗಿದ್ದ ದೊಡ್ಡ ಮಟ್ಟದ ಟೀ ಪುಡಿ ದಾಸ್ತಾನನ್ನು ಹಿಂದಕ್ಕೆ ಕಳುಹಿಸಿವೆ ಎಂದು ಭಾರತೀಯ ಚಹಾ ರಫ್ತುದಾರರ ಸಂಘ(ಐಟಿಇಎ)ದ ಮುಖ್ಯಸ್ಥ ಅಂಶುಮಾನ್ ಕನೊರಿಯಾ ತಿಳಿಸಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲೂ ಹೀಗೇ ಆಗಿದ್ದು, ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಚಹಾಕ್ಕೆ ಅತ್ಯಧಿಕ ಬೇಡಿಕೆಯ ಕನಸು ಕಮರಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಮಾರಾಟವಾಗುವ ಚಹಾ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ
(ಎಫ್ಎಸ್‌ಎಸ್‌ಎಐ)ದ ನಿಯಮಕ್ಕೆ ಅನುಗುಣವಾಗಿರಬೇಕು. ವಿದೇಶಗಳು ಅದಕ್ಕಿಂತಲೂ ಕಠಿಣ ನಿಯಮಗಳನ್ನು ಅನುಸರಿಸುತ್ತವೆ. ಆದರೆ ಭಾರತೀಯ ಚಹಾ ಮಾರಾಟಗಾರರು ಎಫ್ಎಸ್‌ಎಸ್‌ಎಐ ನಿಯಮವನ್ನು ಸಡಿಲಿಸಲು ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಚಹಾ ಬೆಳೆಗಾರರಲ್ಲಿ ಮೊದಲ ಸ್ಥಾನದಲ್ಲಿರುವ ಶ್ರೀಲಂಕಾದಲ್ಲಿ ಆರ್ಥಿಕ ಹೊಡೆತವಿರುವ ಹಿನ್ನೆಲೆ ಭಾರತೀಯ ಚಹಾ ಮಾರುಕಟ್ಟೆಗೆ ಬೇಡಿಕೆ ಹೆಚ್ಚಬೇಕಿತ್ತು, ಆದರೆ ಕೀಟನಾಶಕ ಬಳಕೆಯು ಅದಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಲಾಗಿದೆ.