ಚೆನ್ನೈ: ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ತಂಡವು ಭೂಮಿಗಿಂತ 27 ಪಟ್ಟು ಹೆಚ್ಚು ದೊಡ್ಡದಾಗಿರುವ ಹಾಗೂ 600 ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹವೊಂದನ್ನು ಕಂಡುಹಿಡಿದಿ ದ್ದಾರೆ. ಸೂರ್ಯನ ರೀತಿಯ ನಕ್ಷತ್ರದ ಸುತ್ತಲೂ ಈ ಗ್ರಹವು ಪರಿಭ್ರಮಿಸುತ್ತದೆ. ಈ ಸಂಶೋಧನೆಯನ್ನು ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಪಿಆರ್‌ಎಲ್) ಮಾಡಿದೆ.
ಮೌಂಟ್ ಅಬು ಪರ್ವತದಲ್ಲಿರುವ ಪಿಆರ್‌ಎಲ್ ಗುರುಶಿಖರ ಪರಿವೀಕ್ಷಣಾ ಕೇಂದ್ರದಲ್ಲಿ ಸ್ಥಾಪಿಸಲಾಗಿ ರುವ ದೇಶೀಯ ನಿರ್ಮಿತ ಸ್ಪೆಕ್ಟೋಗ್ರಾಫ್ ಅನ್ನು ವಿಜ್ಞಾನಿಗಳು ಬಳಸಿದ್ದಾರೆ. ಈ ಶೋಧದಿಂದಾಗಿ ವಿಶ್ವದಲ್ಲಿ ಗ್ರಹವನ್ನು ಕಂಡುಹಿಡಿದ ಕೆಲವೇ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಇಸ್ರೋ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಒಂದು ಪೋಸ್ಟ್‌ನಲ್ಲಿ ಈ ಗ್ರಹವನ್ನು ಎಪಿಕ್ 211945201ಬಿ ಅಥವಾ ಕೆ2-236ಬಿ ಎಂದು ಹೆಸರಿಸಲಾಗಿದೆ. ಸುಮಾರು 19.5 ದಿನಗಳಲ್ಲಿ ಗ್ರಹವು ಒಂದು ಸುತ್ತುಹಾಕುತ್ತದೆ ಎಂದು ನಂಬಲಾಗಿದೆ.
ಈ ಗ್ರಹದ ಮೇಲ್ಮೆ„ ತಾಪಮಾನವು ಸುಮಾರು 600 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಭೂಮಿ ಮತ್ತು ಸೂರ್ಯನ ಅಂತರಕ್ಕೆ ಹೋಲಿಸಿದರೆ ಏಳು ಪಟ್ಟು ಹತ್ತಿರವಾಗಿದೆ. ಹೀಗಾಗಿ ಈ ಗ್ರಹದಲ್ಲಿ ಜೀವಿ ಇರುವ ಸಾಧ್ಯತೆಯಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ತನ್ನ ನಕ್ಷತ್ರದಿಂದ ಅತ್ಯಂತ ಸಮೀಪದಲ್ಲಿರುವ ಗ್ರಹಗಳ ಅಧ್ಯಯನದ ದೃಷ್ಟಿಯಲ್ಲಿ ಇದು ಅತ್ಯಂತ ಮಹತ್ವವಾದ ಶೋಧ ಎಂದು ಹೇಳಲಾಗಿದೆ.
ನಾಸಾದ ಕೆಪ್ಲರ್2 ಫೋಟೋಮೆಟ್ರಿ ಮೂಲಕ ಗ್ರಹ ವಿವರ ತಿಳಿಯುವುದು ಕಷ್ಟಸಾಧ್ಯವಾದ್ದರಿಂದ ಸಂಶೋಧಕರ ತಂಡವೇ ಪಾರಸ್ ಸ್ಪೆಕ್ಟ್ರೋಗ್ರಾಫ್ ಅನ್ನು ರೂಪಿಸಿದೆ. ಆರಂಭದಲ್ಲಿ ಕೆಪ್ಲರ್2 ಬಳಸಿಯೇ ಕಂಡುಕೊಳ್ಳಲಾಯಿತಾದರೂ, ಹೆಚ್ಚಿನ ಅಧ್ಯಯನವನ್ನು ಪಾರಸ್ ಮೂಲಕ ಮಾಡಲಾಗಿದೆ. ಇದು ತನ್ನ ನಕ್ಷತ್ರದ ಸುತ್ತಲೂ ಪರಿಭ್ರಮಿಸುವುದರಿಂದ ನಿರ್ದಿಷ್ಟ ಪ್ರಮಾಣದ ಬೆಳಕನ್ನು ತಡೆಯುತ್ತದೆ. ಈ ಬೆಳಕು ತಡೆಯುವ ಪ್ರಮಾಣವನ್ನು ಆಧರಿಸಿ ಗ್ರಹದ ವ್ಯಾಸವನ್ನು ಕಂಡುಕೊಳ್ಳಲಾಗಿದೆ. ಆದರೆ ಇದು ಹೆಚ್ಚಿನ ಅಧ್ಯಯನಕ್ಕೆ ಸಾಲದಾಗಿದೆ.
ವಿಶೇಷ ಪಿಆರ್‌ಎಲ್ ಪಾರಸ್ ಸ್ಪೆಕ್ಟ್ರೋಗ್ರಾಫ್ ಮೂಲಕ ಅಧ್ಯಯನ
ನಕ್ಷತ್ರವನ್ನು 19.5 ದಿನಗಳಲ್ಲಿ ಒಂದು ಸುತ್ತು ಹಾಕುವ ಗ್ರಹ