Advertisement
ಏನಿದು ಮಿಷನ್ 160?ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಹೌರಾ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ವೇಗವನ್ನು ಗಂಟೆಗೆ 160 ಕಿ.ಮೀ. ಏರಿಸುವುದು. ಈ ಗುರಿ ಸಾಧಿಸಲು ಸಚಿವಾಲಯವು ಈಗಾಗಲೇ ಮಾರ್ಗಸೂಚಿ ಯೊಂದನ್ನು ಸಿದ್ಧಪಡಿಸಿದೆ. ಹಳಿಯ ನಿರ್ವಹಣೆ ಯಿಂದ ಹಿಡಿದು ಇಡೀ ರೈಲು ಮಾರ್ಗದುದ್ದಕ್ಕೂ ಬೇಲಿ ಹಾಕುವುದು ಈ ಯೋಜನೆಯಲ್ಲಿ ಸೇರಿದೆ. ಈ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ಸಂಖ್ಯೆ ಕಡಿಮೆಯಿರುವ ಕಾರಣ, ವೇಗ ಹೆಚ್ಚಿಸುವ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಾಧ್ಯವಾಗಲಿದೆ.
ಈಗಾಗಲೇ ರೈಲ್ವೇಯು ಖಾಸಗಿ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮಿಷನ್ 160 ಅನ್ನು ಆದಷ್ಟು ಬೇಗ ಸಾಧಿಸಬೇಕಾಗುತ್ತದೆ.
ಎಪ್ರಿಲ್ 2023ರಿಂದ ಖಾಸಗಿ ರೈಲುಗಳ ಸಂಚಾರ ಆರಂಭವಾಗಲಿದೆ. ಅದಕ್ಕೂ ಮುನ್ನ ರೈಲುಗಳ ಸಂಚಾರದ ವೇಗ ಹೆಚ್ಚಿಸುವುದು ರೈಲ್ವೇ ಇಲಾಖೆಯ ಉದ್ದೇಶವಾಗಿದೆ. ಹೀಗಾಗಿ, ಮುಂದಿನ ತಿಂಗಳಿಂದಲೇ ಕೆಲಸ ಆರಂಭವಾಗುವ ಸಾಧ್ಯತೆಯಿದೆ. ಅಲ್ಲದೆ, ಈ ಎರಡು ಮಾರ್ಗಗಳ ಬಳಿಕ ಹೌರಾ-ಚೆನ್ನೈ, ದಿಲ್ಲಿ-ಚೆನ್ನೈ ಮತ್ತು ಚೆನ್ನೈ-ಮುಂಬಯಿ ಮಾರ್ಗಗಳಲ್ಲೂ ಇದೇ ಕಾಮಗಾರಿ ಕೈಗೆತ್ತಿಕೊಳ್ಳುವ ಚಿಂತನೆ ಇದೆ. ಗಂಟೆಗೆ 130 ಕಿ.ಮೀ. ರೈಲಿನ ಪ್ರಸ್ತುತ ವೇಗ
ಗಂಟೆಗೆ 160 ಕಿ.ಮೀ. ಉದ್ದೇಶಿತ ಗುರಿ
ಮಾರ್ಚ್ 2022 ಪೂರ್ಣ
ಮಾಡಬೇಕಾದ ಕೆಲಸಗಳು – ಹಳಿಗಳ ನಿರ್ವಹಣೆ, ಹಳಿಗಳು ಮತ್ತು ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದು, ಎರಡೂ ಮಾರ್ಗಗಳ ಉದ್ದಕ್ಕೂ ಬೇಲಿ ನಿರ್ಮಾಣ
2,200 ಕೋಟಿ ರೂ. ಬೇಲಿ ನಿರ್ಮಾಣಕ್ಕೆ ತಗಲುವ ವೆಚ್ಚ