Advertisement
ದಲಿತ, ರೈತ, ಅಲ್ಪಸಂಖ್ಯಾಕ ಸಮುದಾಯ ಕೇಂದ್ರಿತ ವಾಗಿ ಆಂದೋಲನ ರೂಪಿಸಲು ಇವರೆಲ್ಲ ಒಂದಾಗಿದ್ದು, ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಈ ನಾಲ್ವರೂ ಜಂಟಿ ಪ್ರಚಾರಕ್ಕೆ ನಿರ್ಧರಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯ ಲಿದ್ದು, ಅಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಆಂದೋಲನಕ್ಕೆ ಚಾಲನೆ ನೀಡುವರು ಎನ್ನಲಾಗಿದೆ.
Related Articles
ಈ ಮಧ್ಯೆ, ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ಪ್ರಾರಂಭೋತ್ಸವಕ್ಕೆ ತೆರಳಿದ್ದ ಜೆಡಿಎಸ್ ಶಾಸಕರಿಗೆ ಕೆ.ಚಂದ್ರಶೇಖರರಾವ್ 2 ಗಂಟೆಗಳ ಕಾಲ ಪ್ರಾದೇಶಿಕ ಪಕ್ಷದ ಅಗತ್ಯ ಮತ್ತು ಮಹತ್ವದ ಬಗ್ಗೆ “ಪಾಠ’ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯತ್ತ ಮುಖ ಮಾಡಿದ್ದ ಜೆಡಿಎಸ್ ಶಾಸಕರಿಗೆ ಮುಂದೆ ನಡೆಯಲಿರುವ ರಾಜಕೀಯ ಧ್ರುವೀಕರಣದ ಸ್ಪಷ್ಟತೆ ಸಿಗಲಿ ಎಂಬ ಕಾರಣಕ್ಕೆ ಎಲ್ಲ ಶಾಸಕರನ್ನು ಕುಮಾರಸ್ವಾಮಿ ಅವರು ಭಾರತ ರಾಷ್ಟ್ರೀಯ ಸಮಿತಿ ಪ್ರಾರಂಭೋತ್ಸವಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.
Advertisement
ಗೌಡರ ಜತೆ ಸಮಾಲೋಚನೆಹೈದರಾಬಾದ್ನಿಂದ ವಾಪಸಾದ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅಲ್ಲಿನ ವಿದ್ಯಮಾನಗಳನ್ನು ವಿವರಿಸಿದ್ದಾರೆ. ಜಗನ್‌ಮೋಹನ್ ರೆಡ್ಡಿ, ಎಂ.ಕೆ.ಸ್ಟಾಲಿನ್ ಜತೆಗೂ ನಡೆಸಿದ ಚರ್ಚೆಯ ವಿವರವನ್ನೂ ತಿಳಿಸಿದ್ದಾರೆ. ಬಿಜೆಪಿ ತಡೆಯಲು ತಂತ್ರ
ಕರ್ನಾಟಕದ ಅನಂತರ ಆಂಧ್ರ ಮತ್ತು ತೆಲಂ ಗಾಣ ದತ್ತ ಬಿಜೆಪಿ ಚಿತ್ತ ಹರಿಸಿರುವುದು, ಜೂ. ಎನ್‌ಟಿಆರ್ ಮತ್ತು ಅಮಿತ್ ಶಾಭೇಟಿ ಜಗನ್ ಹಾಗೂ ಕೆಸಿಆರ್‌ಗೆ ತಲೆಬಿಸಿ ಉಂಟು ಮಾಡಿದೆ. ಹೀಗಾಗಿ ಎಚ್‌ಡಿಕೆ ಹಾಗೂಸ್ಟಾಲಿನ್ ಸೇರಿಕೊಂಡು ಬಿಜೆಪಿ ತಡೆಗೆ ತಂತ್ರ ರೂಪಿಸಲಾಗುತ್ತಿದೆ.