Advertisement

ಮಲೇಷ್ಯಾ : ಭಾರತ ಮೂಲದ ಎಜಿ

03:20 AM Jun 06, 2018 | Team Udayavani |

ಕೌಲಾಲಂಪುರ : ಭಾರತೀಯ ಮೂಲದ ವಕೀಲರೊಬ್ಬರನ್ನು ಅಟಾರ್ನಿ ಜನರಲ್‌ ಆಗಿ ಮಲೇಷ್ಯಾ ನೇಮಕ ಮಾಡಿದೆ. ಮಲೇಷ್ಯಾದಲ್ಲಿ ಮುಸ್ಲಿಮರ ಹೊರತಾದವರಿಗೆ ಈ ಹುದ್ದೆ ನೀಡಬಾರದು ಎಂದು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿರುವ ಮಧ್ಯೆಯೂ, ಮಲೇಷ್ಯಾ ರಾಜಮನೆತನವು ಅಲ್ಪಸಂಖ್ಯಾಕ ಸಮುದಾಯದ ಟಾಮಿ ಥಾಮಸ್‌ ರನ್ನು ನೇಮಕ ಮಾಡಿದೆ. ಪ್ರಸ್ತುತ ಮೊಹಮ್ಮದ್‌ ಅಲಿ ಅಟಾರ್ನಿ ಜನರಲ್‌ ಆಗಿದ್ದಾರೆ. ಅಲ್ಪಸಂಖ್ಯಾತರೊಬ್ಬರಿಗೆ ಈ ಹುದ್ದೆ ಲಭ್ಯವಾಗಿರುವುದು 55 ವರ್ಷಗಳಲ್ಲೇ ಮೊದಲ ಬಾರಿ. ಮಲೇಷ್ಯಾದ ಪ್ರತಿ ವ್ಯಕ್ತಿಯನ್ನೂ ಸಮಾನವಾಗಿ ನೋಡಲಾಗುತ್ತದೆ. ಈ ಸನ್ನಿವೇಶವನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಬಾರದು ಎಂದು ಸುಲ್ತಾನ್‌ 5ನೇ ಮೊಹಮ್ಮದ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next