Advertisement

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

11:12 PM Nov 28, 2024 | Team Udayavani |

ನವದೆಹಲಿ: ಪಾಕಿಸ್ತಾನ ಮತ್ತು ಚೀನಾದ ಮೂಲೆ ಮೂಲೆಗೂ ತಲುಪಲ್ಲ 3500 ಕಿ.ಮೀ. ವ್ಯಾಪ್ತಿಯ ಕೆ-4 ಖಂಡಾಂತರ ಕ್ಷಿಪಣಿ ಪ್ರಯೋಗ­ವನ್ನು ಭಾರತವು ಗುರುವಾರ ಯಶಸ್ವಿ­ಯಾಗಿ ಕೈಗೊಂಡಿದೆ. ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಘಾತ್‌ ಮೂಲಕ ಕ್ಷಿಪಣಿಯ ಪ್ರಯೋ­ಗಾರ್ಥ ಪರೀಕ್ಷೆ ನಡೆದಿದೆ.

Advertisement

ಭಾರತದ 2ನೇ ಅಣ್ವಸ್ತ್ರ ಸಜ್ಜಿತ ಸಬ್‌ಮರೀನ್‌ ಆಗಿರುವ ಐಎನ್‌ಎಸ್‌ ಅರಿಘಾತ್‌ ಆಗಸ್ಟ್‌ನಲ್ಲಷ್ಟೇ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. ಇದೇ ಜಲಾಂತರ್ಗಾಮಿಯ ಮೂಲಕ ಗುರುವಾರ ಬಂಗಾಳಕೊಳ್ಳಿಯಲ್ಲಿ ಕ್ಷಿಪಣಿ ಪ್ರಯೋಗ ನಡೆಸಲಾಗಿದೆ.

ಐಎನ್‌ಎಸ್‌ ಅರಿಘಾತ್‌ ಎನ್ನುವುದು ಅರಿಹಂತ್‌-ದರ್ಜೆಯ 2ನೇ ಜಲಾಂತರ್ಗಾಮಿಯಾಗಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ 2018ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿದೆ. ನಂತರ ಬಂದ

ಐಎನ್‌ಎಸ್‌ ಅರಿಘಾತ್‌ ಅತ್ಯಾಧುನಿಕ ತಂತ್ರಜ್ಞಾನಗಳ ಸೇರ್ಪಡೆ ಮೂಲಕ ಐಎನ್‌ಎಸ್‌ ಅರಿಹಂತ್‌ಗಿಂತಲೂ ಹೆಚ್ಚು ಸುಧಾರಿತ ಎಂಬ ಖ್ಯಾತಿ ಗಳಿಸಿದೆ. ಇದರಲ್ಲಿ ಕೆ-4 ಕ್ಷಿಪಣಿಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next